ರಾಜಕಾರಣದಲ್ಲಿ ಪ್ರಬುದ್ಧ ಭಾಷೆಯಿಲ್ಲ ಎಂದ ಬರಗೂರು

ಬುಧವಾರ, 31 ಅಕ್ಟೋಬರ್ 2018 (16:56 IST)
ಚುನಾವಣೆಯಲ್ಲಿ ವಯಕ್ತಿಕ ವಿಚಾರವನ್ನು ಪ್ರಸ್ತಾಪಿಸಬಾರದು. ಪ್ರಜಾಪ್ರಭುತ್ವ ಪರಿಭಾಷೆಯೆ ಬೇರೆ ಇದೆ. ಪ್ರಭುದ್ಧ ಭಾಷೆ ನಮ್ಮಲ್ಲಿರೂಢಿಗೆ ಬಂದಿಲ್ಲ ಅನ್ನೋದಕ್ಕೆ ಅನೇಕ ಉದಾಹರಣೆಗಳಿವೆ ಎಂದು ಸಾಹಿತಿ ಬರಗೂರು ಹೇಳಿದ್ದಾರೆ. 

ಯಾವುದೇ ರಾಜಕೀಯ ಪಕ್ಷವಾಗಲಿ ವಯಕ್ತಿಕ ವಿಚಾರಗಳನ್ನು ಬಿಟ್ಟು ಸೈದಾಂತಿಕವಾಗಿ ಮುಖಾಮುಖಿಯಾಗಬೇಕು ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದ್ರು. ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಗೊಟಗೋಡಿಯಲ್ಲಿ ನಡೆಯುತ್ತಿರುವ ಜನಪದ ವಿಶ್ವವಿದ್ಯಾಲಯ ನಾಲ್ಕನೇ ಘಟಿಕೋತ್ಸವದಲ್ಲಿ ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ರಾಮಚಂದ್ರಪ್ಪ, ಉಪ ಚುನಾವಣೆಯಲ್ಲಿ ವಯಕ್ತಿಕ ವಿಚಾರವನ್ನು ಪ್ರಸ್ತಾಪಿಸುವುದು ಸರಿಯಲ್ಲ ಎಂದಿದ್ದಾರೆ.  
ಭಾಷೆ ಭ್ರಷ್ಟತೆಯ ಸಂಕೇತವೂ ಹೌದು, ಅದೆಂದೂ ಆಗಬಾರದು.

ಪ್ರಜಾಪ್ರಭುತ್ವವನ್ನು ರಾಜಕಾರಣಿಗಳು ಸೇರಿದಂತೆ ಎಲ್ಲರೂ ಎತ್ತಿ ಹಿಡಿಯಬೇಕಾಗಿದೆ. ವ್ಯಕ್ತಿಯನ್ನು ಮೀರಿದ ಸೈದ್ಧಾಂತಿಕ ರಾಜಕಾರಣ ನಮಗೆಲ್ಲ ಅಗತ್ಯವಿದೆ ಎಂದು ಹೇಳಿದ್ರು. ಇನ್ನೂ ಮೀ ಟೂ ಆಂದೋಲನ ವಿಚಾರವಾಗಿ ಮಾತನಾಡಿ, ಮೀ ಟೂ ಹೆಣ್ಣಿನ ಪರವಾಗಿ ಪ್ರಮುಖ ಆಂದೋಲನವಾಗಿ ರೂಪಗೊಂಡರೆ ಸ್ವಾಗತಾರ್ಹ ಎಂದರು.  

ಯಾವುದೇ ಕಾರಣಕ್ಕೂ ವ್ಯಕ್ತಿ ದ್ವೇಷಕ್ಕೆ ಹಾಗೂ ಉಪಯೋಗಕ್ಕೆ ಮೀ ಟೂ ಕಾರಣವಾಗಬಾರದು ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ