ಡಿಕೆ ಶಿವಕುಮಾರ್ ಮನೆಗೆ ರಾತ್ರಿ ಹೋಗಿದ್ದ ವಿಜಯೇಂದ್ರ ಮಾಡಿದ್ದೇನು ವಿಡಿಯೋ ಇದೆ: ಬಸನಗೌಡ ಪಾಟೀಲ್ ಯತ್ನಾಳ್

Krishnaveni K

ಗುರುವಾರ, 28 ನವೆಂಬರ್ 2024 (16:22 IST)
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗಂಭೀರ ಆರೋಪವೊಂದು ಮಾಡಿದ್ದಾರೆ.

ತಮ್ಮ ವಿರುದ್ಧ ರಾಜ್ಯ ನಾಯಕರು ಹೈಕಮಾಂಡ್ ಗೆ ದೂರು ನೀಡುವುದಾಗಿ ಹೇಳಿರುವ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ  ‘ನಾನು ಸ್ವಾಗತ ಮಾಡುತ್ತೇನೆ. ಭ್ರಷ್ಟಾಚಾರ ಆರೋಪ ಇದ್ರೆ ದೂರು ನೀಡಲಿ. ಡಿಕೆ ಶಿವಕುಮಾರ್ ಮನೆಗೆ ರಾತ್ರಿ ಹೋಗಿ ಈ ವಿಜಯೇಂದ್ರ 20 ಪತ್ರಕ್ಕೆ ಸಹಿ ಹಾಕಿಸಿಕೊಂಡು ಬಂದಿದ್ದಾನೆ. ಆ ವಿಡಿಯೋ ಇದೆ.  ನಾನು ಕಾಂಗ್ರೆಸ್ ಜೊತೆ ಕೈ ಜೋಡಿಸಿದ್ದೇನೆ ಎಂದು ಆರೋಪ ಮಾಡ್ತಾನಲ್ಲ ಬಿಸಿ ಪಾಟೀಲ, ಅವರ ವಿರುದ್ಧ ನನ್ನ ಬಳಿ ಸಾಕ್ಷ್ಯ ಇದೆ’ ಎಂದು ಯತ್ನಾಳ್ ಹೇಳಿದ್ದಾರೆ.

‘ಯಾರು ಏನು ಬೇಕಾದರೂ ದೂರು ಕೊಡಲಿ. ನನಗೆ ಯಾವುದೇ ಭಯವಿಲ್ಲ ಎಂದಿದ್ದಾರೆ. ‘ನನಗೂ ನಿನ್ನೆ ದಿಲ್ಲಿಯಿಂದ ಫೋನ್ ಬಂದಿದೆ. ತಕ್ಷಣ ಹೊರಟು ಬನ್ನಿ. ನನ್ನದೊಂದು ಟೀಂ ಇದೆ. ಭ್ರಷ್ಟಾಚಾರ ವಿರುದ್ಧ, ವಕ್ಫ್ ವಿರುದ್ಧ ನಮ್ಮದೊಂದು ಟೀಂ ಮಾಡಿಕೊಂಡಿದ್ದೇವೆ. ಇಡೀ ತಂಡವನ್ನು ದೆಹಲಿಗೆ ಕರೆಸಿಕೊಳ್ಳಲಿ. ಎಲ್ಲಾ ಹೇಳ್ತೀನಿ’ ಎಂದಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಬದಲಾವಣೆ ಬಗ್ಗೆ ಪ್ರತಿಕ್ರಿಯಿಸಿರುವ ಯತ್ನಾಳ್, ಬದಲಾವಣೆ ಆಗಲಿ. ಪಕ್ಷಪಾತ ರಹಿತ, ಎಲ್ಲರ ಅಭಿಪ್ರಾಯಗಳಿಗೆ ಬೆಲೆ ಕೊಡುವವರು ಬಿಜೆಪಿ ಅಧ್ಯಕ್ಷರಾಗಬೇಕು ಎಂದಿದ್ದಾರೆ. ಪ್ರಧಾನ ಮಂತ್ರಿಗಳು ಹೇಳಿದ್ದಾರೆ ವಂಶವಾದವನ್ನು ಬೆಂಬಲಿಸಲ್ಲ ಅಂತ. ಅದೇ ರೀತಿ ಇಲ್ಲಿಯೂ ವಂಶವಾದವನ್ನು ನಾವು ಒಪ್ಪಲ್ಲ. ಅಪ್ಪ ಮುಖ್ಯಮಂತ್ರಿಯಾಗಿದ್ದರು, ಒಬ್ಬ ಮಗನನ್ನು ಈಗ ಸಂಸದರಾಗಿ ಮಾಡಿದ್ದೀರಿ, ಇನ್ನೊಬ್ಬನಿಗೆ ರಾಜ್ಯಾಧ್ಯಕ್ಷ ಪಟ್ಟ ಕಟ್ಟಿದ್ದೀರಿ. ಇನ್ನೂ ಎಲ್ಲಾ ಅಧಿಕಾರ ನಮಗೇ ಬೇಕು ಎಂದರೆ ಹೇಗೆ? ಅವರು ಮಾತ್ರನಾ ಸೈಕಲ್ ನಲ್ಲಿ ಹೋಗಿ ಪಕ್ಷ ಕಟ್ಟಿದ್ದು, ನಾವು ಮರ್ಸಿಡಸ್ ಕಾರಿನಲ್ಲಿ ಓಡಿ ಪಕ್ಷ ಕಟ್ಟಿದ್ದೆವಾ ಎಂದು ಯತ್ನಾಳ್ ಟಾಂಗ್ ಕೊಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ