ಈಗ ನಡೆಯಲಿರುವ ಉಪಚುನಾವಣೆಯಲ್ಲಿ ಬಿಜೆಪಿ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬಿಜೆಪಿ ಚುನಾವಣಾ ಆಯೋಗಕ್ಕೆ ನೀಡಿದೆ. ಈ ಪಟ್ಟಿಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ, ಪ್ರತಾಪ್ ಸಿಂಹರಂತಹ ನಾಯಕರ ಹೆಸರುಗಳೇ ಇಲ್ಲ. ಇದರ ವಿರುದ್ಧ ಯತ್ನಾಳ್ ಈಗ ಕಿಡಿ ಕಾರಿದ್ದಾರೆ.
ನನಗೆ, ರಮೇಶ್ ಜಾರಕಿಹೊಳಿಯವರಿಗೆ ಬಿವೈ ವಿಜಯೇಂದ್ರ ಸ್ಟಾರ್ ಪ್ರಚಾರಕ ಪಟ್ಟ ನೀಡಬೇಕಾದ ಅವಶ್ಯಕತೆಯಿಲ್ಲ. ನಮ್ಮನ್ನು ಈಗಾಗಲೇ ಕರ್ನಾಟಕದ ಜನ ಒಪ್ಪಿಕೊಂಡಿದ್ದಾರೆ. ನಮಗೆ ಯಾರ ಬಿರುದೂ ಬೇಕಾಗಿಲ್ಲ. ವಿಜಯೇಂದ್ರಗೆ ಅವರ ಅಪ್ಪನ ಕಾಲದಲ್ಲಿ ಹೊಡೆದ ಸಾವಿರಾರು ಕೋಟಿ ರೂ. ದುಡ್ಡಿದೆ. ಅದನ್ನು ಖರ್ಚು ಮಾಡಲು ಪ್ರಚಾರ ಮಾಡ್ತಾರೆ ಎಂದು ಯತ್ನಾಳ್ ಆರೋಪಿಸಿದ್ದಾರೆ.
ಈಗೆಲ್ಲಾ ವಿಜಯೇಂದ್ರ ಭಾಷಣ ಕೇಳಲು ಯಾರೂ ಜನ ಸೇರಲ್ಲ. ಕರ್ನಾಟಕ ಬಿಜೆಪಿ ಎಂದು ಎಕ್ಸ್ ಪೇಜ್ ಇದೆಯಲ್ಲ. ಅಲ್ಲಿ ಎಲ್ಲಾ ಟ್ವೀಟ್ ಗಳೂ ಬರೀ ವಿಜಯೇಂದ್ರನನ್ನು ಹೊಗಳಿಯೇ ಬರೋದು. ಅದನ್ನು ಕರ್ನಾಟಕ ಬಿಜೆಪಿ ಎಂದಲ್ಲ, ವಿಜಯೇಂದ್ರ ಬಿಜೆಪಿ ಎಂದು ಹೆಸರು ಬದಲಾಯಿಸಿಕೊಳ್ಳುವುದು ಒಳ್ಳೆಯದು ಎಂದಿದ್ದಾರೆ.