ಬೆಂಗಳೂರು: ಡಿಕೆ ಶಿವಕುಮಾರ್ ಕೊಟ್ಟ ಭಿಕ್ಷೆಯಿಂದ ಬಿವೈ ವಿಜಯೇಂದ್ರ ಎಂಎಲ್ಎ ಆಗಿರೋದು ಎಂದು ಬಂಡಾಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ನಾಯಕತ್ವದ ಬದಲಾಗಲೇಬೇಕು ಎಂದು ಪಟ್ಟು ಹಿಡಿದಿರುವ ಬಸನಗೌಡಪಾಟೀಲ್ ಯತ್ನಾಳ್ ಮತ್ತೆ ಇಂದು ಮಾಧ್ಯಮಗಳ ಮುಂದೆ ವಿಜಯೇಂದ್ರ ಮತ್ತು ಯಡಿಯೂರಪ್ಪ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯ ಬಿಜೆಪಿ ನಾಯಕತ್ವದ ಭ್ರಷ್ಟ ಯಡಿಯೂರಪ್ಪ ಮತ್ತು ಕುಟುಂಬದ ಹಿಡಿತದಿಂದ ಬಿಡುಗಡೆಯಾಗಬೇಕು ಎಂಬುದು ನಮ್ಮ ಬೇಡಿಕೆ. ಸ್ವತಃ ಪ್ರಧಾನ ಮಂತ್ರಿ ಮೋದಿಯವರೇ ಹೇಳ್ತಾರೆ, ನಮ್ಮ ಪಕ್ಷದಲ್ಲಿ ಕುಟುಂಬ ರಾಜಕಾರಣ ಇಲ್ಲ ಅಂತ. ಹೀಗಾಗಿ ನಾವು ಯಡಿಯೂರಪ್ಪ ಕುಟುಂಬದ ಹೊರತಾಗಿ ಬೇರೆಯವರಿಗೆ ನಾಯಕತ್ವ ಕೊಡಿ ಎಂದು ಕೇಳುತ್ತಿದ್ದೇವೆ ಎಂದಿದ್ದಾರೆ.
ಬಿವೈ ವಿಜಯೇಂದ್ರ, ಯಡಿಯೂರಪ್ಪ ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದಾರೆ. ವಿಜಯೇಂದ್ರ ಎಂಎಲ್ಎ ಆಗಿರೋದು ಡಿಕೆ ಭಿಕ್ಷೆಯಿಂದ. ಯಡಿಯೂರಪ್ಪ ಜಮೀರ್ ಅಹ್ಮದ್ ಜೊತೆ ಅಡ್ಜಸ್ಟ್ ಮಾಡಿಕೊಂಡಿದ್ದಾರೆ ಎಂದು ಯತ್ನಾಳ್ ಆರೋಪ ಮಾಡಿದ್ದಾರೆ.