ಮೈತ್ರಿ ಸರಕಾರ ಬಿದ್ದು ಹೋಗುತ್ತದೆ ಎಂದು ಬಸವರಾಜ ಹೊರಟ್ಟಿ ಹೇಳಿದ್ಯಾಕೆ?

ಗುರುವಾರ, 27 ಡಿಸೆಂಬರ್ 2018 (17:45 IST)
ಕಾಂಗ್ರೆಸ್ ನವರು ತಮ್ಮದೇ  ಸರ್ಕಾರ ಇದೆ ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ. ಜೆಡಿಎಸ್ ಪಕ್ಷದ ಬಗ್ಗೆ ಯಾವುದೇ ರೀತಿಯ ಗೌರವ ಸಿಗುತ್ತಿಲ್ಲ  ಎಂದು ಬಸವರಾಜ ಹೊರಟ್ಟಿ  ಸಂಕಟ ತೋಡಿಕೊಂಡಿದ್ದಾರೆ.

ಹುಬ್ಬಳ್ಳಿ ನಗರದಲ್ಲಿ ಮಾಧ್ಯಮವರ ಜತೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದವರ ವರ್ತನೆ ನೋಡಿ ನೋಡಿ ಬೇಸತ್ತು ಹೋಗಿದ್ದಾರೆ. ನಮ್ಮ ವರಿಷ್ಠರು ಹೀಗೆ ಮುಂದುವರೆದರೇ  ಮೈತ್ರಿ ಸರ್ಕಾರ ಬಿದ್ದುಹೋಗುತ್ತದೆ. ಕಾಂಗ್ರೆಸ್ ನವರೆ ಹೆಚ್ಚು ನಿಗಮ ಮಂಡಳಿ ಪಡೆದಿದ್ದಾರೆ. ಇದರಿಂದ ಜೆಡಿಎಸ್ ನವರು ತುಂಬಾ ಬೇಸತ್ತು ಹೋಗಿದ್ದಾರೆ ಎಂದರು.

ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರು ಹೊಂದಾಣಿಕೆ ಮಾಡಿಕೊಳ್ಳಲು ಪ್ರಯತ್ನ ಮಾಡ್ತಾಯಿದ್ದರೂ
ಸಿದ್ದರಾಮಯ್ಯ ಅವರಿಗೆ ಈ ಮೈತ್ರಿ ಸರ್ಕಾರ ನಡೆಸಬಾರದು ಎನ್ನುವ ಉದ್ದೇಶ ಇರಬಹುದು ಏನೋ ತಿಳಿತಿಲ್ಲ ಎಂದರು. ಕುಮಾರಸ್ವಾಮಿ  ಅವರಿಗೆ ಅಧಿಕಾರ ನಡೆಸಲು ಕಾಂಗ್ರೆಸ್ ಬಿಡ್ತಾಯಿಲ್ಲಾ.

ಕಾಂಗ್ರೆಸ್ ನವರಿಗೆ ಮನಸ್ಸು ಇಲ್ಲಾ ಅಂದರೆ ಯಾಕೇ ಸರ್ಕಾರ ನಡೆಸಬೇಕು. ಒಪ್ಪಂದ ರೀತಿಯಲ್ಲಿ ಸರ್ಕಾರ ನಡೆಸಬೇಕು ಇಲ್ಲವಾದ್ರೆ ಸರ್ಕಾರ ನಡೆಸುವ ಅಗತ್ಯ ಇಲ್ಲಾ ಎಂದು ಮಾತನಾಡಿದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ