ದ್ವೇಷದ, ಸೇಡಿನ ರಾಜಕಾರಣ ಮಾಡಲು ಪ್ರಾರಂಭಿಸಿದ್ದಾರೆ : ಬಸವರಾಜ ಬೊಮ್ಮಾಯಿ
ಶನಿವಾರ, 27 ಮೇ 2023 (07:14 IST)
ನೂತನ ಸರ್ಕಾರ ರಚನೆಯಾಗಿದೆ, ಎಂಟು ಜನ ಸಚಿವರಾಗಿದ್ದಾರೆ. ಈ ಸಚಿವರು ರಾಜ್ಯ, ಜನರ ಹಿತದೃಷ್ಟಿಯಿಂದ ಮಾತಾಡ್ತಿಲ್ಲ. ದ್ವೇಷದ, ಸೇಡಿನ ರಾಜಕಾರಣ ಮಾಡಲು ಪ್ರಾರಂಭಿಸಿದ್ದಾರೆ.
ರಾಜ್ಯದ ಅಭಿವೃದ್ಧಿ ಬದಲು ದ್ವೇಷದ ರಾಜಕಾರಣವೇ ಈ ಸರ್ಕಾರಕ್ಕೆ ಪ್ರಮುಖವಾಗಿದೆ. ಅವರು ಏನೇ ಕೇಸ್ ಹಾಕಿದರೂ ಸಮರ್ಥವಾಗಿ ಎದುರಿಸುತ್ತೇವೆ. ಹಿಂದೆನೂ ಅವರು ಕೇಸ್ ಗಳನ್ನು ಹಾಕಿದ್ರು. ಒಂದು ಚುನಾಯಿತ ಸರ್ಕಾರದ ಎದುರು ಹಲವು ಸಮಸ್ಯೆಗಳಿವೆ.
ಈ ಸಮಸ್ಯೆಗಳನ್ನು ನಿವಾರಣೆ ಮಾಡುವ ವಿಚಾರ ಎಲ್ಲೂ ಕಾಣ್ತಿಲ್ಲ. ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಎಲ್ಲೂ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಪ್ರಯತ್ನ ಆಗಿಲ್ಲ ಎಂದರು. ಸಿಎಂ ಆಯ್ಕೆ ವಿಚಾರ, ಭಿನ್ನಾಭಿಪ್ರಾಯ ಗಮನಿಸಿದ್ದೇನೆ. ಅವರಲ್ಲಿರುವ ಎರಡು ಬಣಗಳು, ಮಂತ್ರಿಗಳ ಆಯ್ಕೆಯಲ್ಲಿ ಗೊಂದಲ ಎಲ್ಲ ನೋಡುತ್ತಿದ್ದೇನೆ.
ಇದು ಎಲ್ಲೋ ಒಂದು ರೀತಿಯಲ್ಲಿ ಸಮ್ಮಿಶ್ರ ಸರ್ಕಾರ ರೀತಿ ಇದೆ. ಒಂದೇ ಪಕ್ಷದಲ್ಲಿ ಸಮ್ಮಿಶ್ರ ಸರ್ಕಾರ ಇದೆ ಅನಿಸ್ತಿದೆ. ಕಳೆದ ಸಮ್ಮಿಶ್ರ ಸರ್ಕಾರವು ಲೋಕಸಭೆ ಚುನಾವಣೆವರೆಗೆ ಮಾತ್ರ ಇತ್ತು. ಈ ಸಮ್ಮಿಶ್ರ ಸರ್ಕಾರವೂ ಲೋಕಸಭೆ ಚುನಾವಣೆ ವರೆಗೆ ಮಾತ್ರ ಇರುತ್ತದೆ ಎಂದು ಕಾಂಗ್ರೆಸ್ ಸರ್ಕಾರದ ಬಗ್ಗೆ ಬೊಮ್ಮಾಯಿ ಭವಿಷ್ಯ ನುಡಿದರು.