‘ಕುಮಾರಸ್ವಾಮಿಗೆ ನೇರ ಪ್ರಶ್ನೆ ಮಾಡಿದ ಬಸವರಾಜ ಹೊರಟ್ಟಿ’

ಶನಿವಾರ, 19 ಅಕ್ಟೋಬರ್ 2019 (15:26 IST)
ನಾವು ಹೆಚ್.ಡಿ. ಕುಮಾರಸ್ವಾಮಿ ನಾಯಕತ್ವವನ್ನು ಪ್ರಶ್ನೆ ಮಾಡಿಲ್ಲ. ಅವರು ಯಾಕೆ ಆ ರೀತಿ ತಿಳಿದುಕೊಂಡಿದ್ದಾರೆಂಬುದು ಗೊತ್ತಿಲ್ಲ. ಹೀಗಂತ ಜೆಡಿಎಸ್ ಮುಖಂಡ ಬಸವರಾಜ ಹೊರಟ್ಟಿ ಹೇಳಿದ್ದಾರೆ.

ಹುಬ್ಬಳ್ಳಿ ಮಾತನಾಡಿರೋ ಹೊರಟ್ಟಿ, ಶಾಸಕರಾಗಿ ಕೆಲವು ವಿಷಯಗಳನ್ನು ಕೇಳಿದ್ದೇವೆ, ಆ ರೀತಿ ಕೇಳೋದು ತಪ್ಪಾ? ಎಂದು ಪ್ರಶ್ನೆ ಮಾಡಿದ್ರು.

ನಾವೇನು ಅವರ ನಾಯಕತ್ವವನ್ನು ಪ್ರಶ್ನೆ ಮಾಡಿಲ್ಲಾ. ಅಲ್ಲದೇ ಹೆಚ್.ಡಿ. ದೇವೆಗೌಡರು ಹೇಳಿದಂತೆ ನಡೆದುಕೊಂಡು ಹೋಗುತ್ತಿದ್ದೇವೆ ಅಂತ ಹೇಳಿದ್ರು.

ಇನ್ನು, ಸಾ.ರಾ.ಮಹೇಶ್, ಹೆಚ್. ವಿಶ್ವನಾಥ ಆಣೆ ಪ್ರಮಾಣ ವಿಚಾರದಲ್ಲಿ ಇಬ್ಬರದ್ದೂ ತಪ್ಪಿದೆ ಅಂತ ಬಸವರಾಜ ಹೊರಟ್ಟಿ ಹೇಳಿದ್ರು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ