‘ಸಿಎಂ ದೊಂಬರಾಟ ಮಾಡೋದನ್ನ ಬಿಡಲಿ ಎಂದ ಬಿಎಎಸ್ವೈ’

ಸೋಮವಾರ, 10 ಜೂನ್ 2019 (21:18 IST)
ಜಿಂದಾಲ್ ಗೆ ಭೂಮಿ ನೀಡುತ್ತಿರೋ ಸರ್ಕಾರ ಕಿಕ್ ಬ್ಯಾಕ್ ಪಡೆದುಕೊಂಡು ಭೂಮಿ ನೀಡುತ್ತಿದೆ ಎಂದು ಮೈತ್ರಿ ಸರ್ಕಾರದ ವಿರುದ್ಧ ಬಿ.ಎಸ್.ಯಡಿಯೂರಪ್ಪ ಗಂಭೀರ ಆರೋಪ ಮಾಡಿದ್ದಾರೆ.

ನಾನು 13 ರಂದು ದೆಹಲಿಗೆ ಹೋಗಬೇಕಿದೆ. ಹೀಗಾಗಿ 14,15,16 ರಂದು ಧರಣಿ ಪ್ರತಿಭಟನೆ ನಡೆಸುತ್ತೇವೆ ಎಂದರು.
ನಾಡಿನಲ್ಲಿ ಬರ ತಾಂಡವವಾಡುತ್ತಿದೆ, ಹಳ್ಳಿಗಳಿಗೆ ಹೋದಾಗ ಸಮಸ್ಯೆಗಳನ್ನ ನೋಡಿದ್ರೆ ಕಣ್ಣಲ್ಲಿ ನೀರು ಬರುತ್ತೆ.

ಗ್ರಾಮ ವಾಸ್ತವ್ಯ ಅರ್ಥ ಹೀನಾವಾಗಿದ್ದು, ಸಿಎಂ ಕುಮಾರಸ್ವಾಮಿ ಒಂದು ಕಡೆಯೂ ಬರದ ಬಗ್ಗೆ ಕ್ರಮ ತೆಗೆದುಕೊಂಡಿಲ್ಲ.
ಕುಡಿಯೋ ನೀರಿನ ಸಮಸ್ಯೆ, ಶುದ್ಧ ಕುಡಿಯೋ ನೀರಿಗ ಘಟಕಗಳು 8೦% ಕೆಟ್ಟು ಹೋಗಿವೆ. ಮೂರುದಿನಗಳ ಸತ್ಯಾಗ್ರಹದಲ್ಲಿ ಶಾಸಕರು, ಸಂಸದರು ಎಲ್ಲರೂ ಭಾಗಿಯಾಗ್ತಾರೆ ಎಂದರು.

ಸರ್ಕಾರಕ್ಕೆ ಬಿಸಿ ಮುಟ್ಟಿಸೋ ಕೆಲಸ ಮಾಡಬೇಕಿದೆ. ಗ್ರಾಮ ವಾಸ್ತವ್ಯ ಬಿಟ್ಟು, ಸಂಕಷ್ಟಗಳ ಬಗ್ಗೆ ತಿಳಿದುಕೊಂಡು ನಂತರ ಸಿಎಂ ಗ್ರಾಮ ವಾಸ್ತವ್ಯ ಮಾಡಲಿ. ದೊಂಬರಾಟ ಮಾಡೋದನ್ನ ಬಿಡಲಿ ಎಂದು ಸಿಎಂ ವಿರುದ್ಧ ಗರಂ ಆದರು.

ಸಿಎಂ ನಿರ್ಲಕ್ಷ್ಯದಿಂದಾಗಿ  ಸರ್ಕಾರ ಬದುಕಿದ್ಯೋ ಸತ್ತಿದ್ಯೋ ಎಂಬ ಪರಿಸ್ಥಿತಿಯಲ್ಲಿದೆ. ಸಿಎಂ ಒಂದು ದಿನದ ಬರ ಪ್ರವಾಸ ಮಾಡಿಲ್ಲ. ಬರ, ರೈತರ ಸಾಲ ಮನ್ನಾ , ಜಿಂದಾಲ್ ಗೆ ಭೂಮಿ ನೀಡುತ್ತಿರೋ ವಿಚಾರ ನಾವು ಹೋರಾಟ ಮಾಡುತ್ತೇವೆ ಎಂದರು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ