ಕೊರೋನಾ ಜಾಗೃತಿಗೆ BBMP ಒತ್ತು
ಚೀನಾದಲ್ಲಿ ಕೊರೋನಾ ಅಧಿಕಗೊಂಡಿದೆ. ಅಲ್ಲಿ ಕೊರೋನಾ ಮರಣ ಮೃದಂಗ ಭಾರಿಸುತ್ತಿದೆ. ಇದರಿಂದ ಭಾರತದಲ್ಲಿ ಆತಂಕ ಶುರುವಾಗಿದೆ. ಬೆಂಗಳೂರು ನಗರದಲ್ಲಿ ಅಧಿಕ ಮಂದಿ ವಾಸ ಮಾಡ್ತಿದ್ದು, ಕೊರೋನಾತಂಕ ಮನೆ ಮಾಡಿದೆ. ಬಿಬಿಎಂಪಿಗೆ ಮತ್ತೆ ಕೊರೊನಾ ಟೆನ್ಷನ್ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ರಾಜಧಾನಿಯಲ್ಲಿ ಕೊರೊನಾ ಕಂಟ್ರೋಲ್ಗೆ BBMP ಜಾಗೃತಿ ಕಾರ್ಯಕ್ಕೆ ಒತ್ತು ನೀಡಿದೆ. ಮಾಸ್ಕ್ ಕಡ್ಡಾಯ ಪಾಲನೆಗೆ BBMP ಮುಂದಾಗಿದೆ. ದಂಡ ಪ್ರಯೋಗ ಅಸ್ತ್ರ ಸದ್ಯಕ್ಕಿಲ್ಲ ಎಂದು ತಿಳಿಸಿದೆ. ಮಾರ್ಷಲ್ ಮೂಲಕ ಮಾಸ್ಕ್ ಹಾಕುವ ಕುರಿತು ಜಾಗೃತಿ ಮೂಡಿಸುವುದಕ್ಕೆ ಸೂಚನೆ ನೀಡಲಾಗಿದೆ. ಜಾಗೃತಿಗಾಗಿ 441 ಮಾರ್ಷಲ್ಗಳನ್ನು ಬಳಕೆ ಮಾಡಲು ಯೋಜಿಸಲಾಗಿದೆ. ಜೊತೆಗೆ BBMPಯ 800ಕ್ಕೂ ಅಧಿಕ ಆರೋಗ್ಯ ಸಿಬ್ಬಂದಿಯಿಂದ ಜಾಗೃತಿ ಮೂಡಿಸಲು ಮುಂದಾಗಿದೆ. ಮಾರುಕಟ್ಟೆ, ಶಾಪಿಂಗ್ ಕಾಂಪ್ಲೆಕ್ಸ್ , ಮದುವೆ ಮಂಟಪ, ರಾಜಕೀಯ ಕಾರ್ಯಕ್ರಮ, ಪ್ರತಿಭಟನಾ ಸ್ಥಳದಲ್ಲಿ ಜಾಗೃತಿಗೆ ಒತ್ತು ಕೊಡಲಾಗಿದೆ.