ಚೀನಾದಲ್ಲಿ ಕೋವಿಡ್ ಹೆಚ್ಚಾಗುತ್ತಿದ್ದಂತೆ ನಗರದಲ್ಲಿ ಕೋವಿಡ್ ನಿಯಮ ಪಾಲಿಸುವಂತೆ ಸೂಚನೆ

ಗುರುವಾರ, 22 ಡಿಸೆಂಬರ್ 2022 (13:38 IST)
ಚೀನಾದಲ್ಲಿ ಕೋವಿಡ್ ಹೆಚ್ಚಾಗುತ್ತಿದ್ದು,ನಗರದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.ಇನ್ನೂ ಈ ವೇಳೆ ಮಾತನಾಡಿದ ಬಿಬಿಎಂಪಿ‌ಆಯುಕ್ತರು ನಿನ್ನೆ ನಮ್ಮ ತಾಂತ್ರಿಕ ಸಲಹಾ ಸಮಿತಿಯೊಂದಿಗೆ ಒಂದು ಸುತ್ತಿನ ಸಭೆ ನಡೆದಿದೆ.Tac ಕಮಿಟಿ ಒಂದಷ್ಟು ಶಿಫಾರಸ್ಸುಗಳನ್ನು ನೀಡಿದ್ದಾರೆ.ಆ ಶಿಫಾರಸ್ಸು ಗಳನ್ನು ನಾವು ಸರ್ಕಾರಕ್ಕೆ ಕಳಿಸಿದ್ದೇವೆ.ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಇಂದು  ಮೀಟಿಂಗ್ ನಡೆಯಲಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದಾರೆ.
 
ಸೋಷಿಯಲ್ ಡಿಸ್ಟನ್ಸ್ , ಮಾಕ್ಸ್ ಧರಿಸೋ, ಕೈ ತೊಳೆಯುವ ಪ್ರಕ್ರಿಯೆಗಳನ್ನು ಜನ ಮಾಡುತ್ತಿರುವಂತೆ ಮನವಿ ಮಾಡುತ್ತೆವೆ .ಜನ ಸಂದಣಿ ಇರುವ ಜಾಗಗಳನ್ನು  ಅವೈಡ್ ಮಾಡಲೇ ಬೇಕು .ಇಡೀ ರಾಜ್ಯಕ್ಕಾಗಿ ಅನ್ವಯವಾಗುವ ರೀತಿ  ಶಿಫಾರಸ್ಸು ನೀಡ್ತಾರೆ.ಸಧ್ಯದಲ್ಲಿ ಇದು ಶೀಫಾರಸ್ಸು - ರೂಪದಲ್ಲಿದೆ.ಬೂಸ್ಟರ್ ಡೋಸ್ ತೆಗೆದುಕೊಳ್ಳಿ ಎಂದು ಹೇಳುತ್ತೆವೆ.ಬೂಸ್ಟರ್ ಡೋಸ್ ಗಳು  ಲ್ಯಾಪ್ಸ್ ಆಗ್ತಾ ಇದೆ.ಸದ್ಯಕ್ಕೆ ಯಾವ ಪರಿಸ್ಥಿತಿ ಇದೆ ಅದಕ್ಕೆ ಅನುಸಾರವಾಗಿ ನಾವು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ