ಕಲಿಕೆಯಿಂದ ಹಿಂದೂಳಿದ ಮಕ್ಕಳಿಗಾಗಿ ವಂಡರ್ ಆನ್ ವೀಲ್ಸ್ ಬಸ್ಸುಗಳ ವ್ಯವಸ್ಥೆ ಮಾಡಿದ ಬಿಬಿಎಂಪಿ

ಸೋಮವಾರ, 12 ಸೆಪ್ಟಂಬರ್ 2022 (20:35 IST)
ಬಿಬಿಎಂಪಿ ಮುಖ್ಯ ಆಯುಕ್ತರಿಂದ ವಂಡರ್ ಆನ್ ವೀಲ್ಸ್ ಬಸ್ಸುಗಳನ್ನ ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿ ಉದ್ಘಾಟನೆ ಮಾಡಲಾಗಿದೆ.ಬಿಬಿಎಂಪಿಯಿಂದ ಮನೆ ಬಾಗಿಲಿಗೆ ಶಾಲೆ ಯೋಜನೆ ಎಂಬ ವಿನೂತನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.
 
ಶಾಲೆಗಳಿಂದ ಹೊರಗುಳಿದ ಮಕ್ಕಳಿಗಾಗಿ ಮನೆ ಬಾಗಿಲಿಗೆ ಶಾಲೆಯ ಬಸ್ ಗಳನ್ನ ಕಳಿಸುವ ವಿನೂತನ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.ಒಟ್ಟು ಹತ್ತು ಬಸ್ ಗಳಲ್ಲಿ ಆಟ ಪಾಠವನ್ನು ಕಲಿಸುವ ಯೋಜನೆ ಇದ್ದಾಗಿದೆ.ಈ ಬಸ್ಸಗಳಲ್ಲಿ ವಿನೂತನ ಕಲಿಕಾ ಸಾಮಾಗ್ರಿಗಳಿಂದ ಕಲಿಕೆಯ ಹೊಸ ಪ್ರಯತ್ನ ಮಾಡಲಾಗಿದೆ.ನುರಿತ ಶಿಕ್ಷಕರು ಹಾಗೂ ವಿಭಿನ್ನ ವಾತವರಣ ಕಲ್ಪಿಸುವ ವಂಡರ್ ಆನ್ ವೀಲ್ಸ್  ವತಿಯಿಂದ ಈ ಯೋಜನೆ ಜಾರಿಗೆ ತರಲಾಗಿದೆ.
 
ಇನ್ನು ಅಂಗನವಾಡಿ ಮಕ್ಕಳ ಅಮೂಲಾಗ್ರ ಕಲಿಕ ಸಾಮರ್ಥ್ಯ ಹೆಚ್ಚಿಸುವುದಕ್ಕಾಗಿ ಈ ವ್ಯವಸ್ಥೆ ಜಾರಿಗೆ ತರಲಾಗಿದೆ.ನರ್ಸರಿ ಮತ್ತು ಅಂಗನವಾಡಿ ಮಕ್ಕಳಿಗೆ ನಿತ್ಯ ಬೆಳ್ಳಗೆ 9:30 ರಿಂದ 3:30 ರವರೆಗೆ ಕಲಿಕ ಚಟುವಟಿಕೆ ನಿರ್ವಹಿಸಲು ವಂಡರ್ ಆನ್ ವೀಲ್ಸ್ ಬಸ್ ವ್ಯವಸ್ಥೆ ಮಾಡಲಾಗಿದೆ.ಮುಂದಿನ ದಿನಗಳಲ್ಲಿ ಹೆಚ್ಚು ಪ್ರದೇಶಗಳಿಗೆ ವಿಸ್ತರಿಸಲು ಯೋಜನೆ ಸಿದ್ದವಾಗಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ