ವಿಶ್ವ ವಿದ್ಯಾಲಯದ ಜಾಗದ ಮೇಲೆ ಕಣ್ಣಿಕ್ಕಿದ ಬಿಬಿಎಂಪಿ..!

ಭಾನುವಾರ, 11 ಸೆಪ್ಟಂಬರ್ 2022 (19:52 IST)
ಬಿಬಿಎಂಪಿ ಮೊದಲು ಯಾವ ಯಾವ ಜಾಗದಲ್ಲಿ ಏನು ಮಾಡಬೇಕು ಅಂತಾ  ಸೂಚನೆ  ನೀಡಬೇಕಿತ್ತು. ಆದರೆ ಬಿಬಿಎಂಪಿ ಹಾಗೆ ಮಾಡದೇ. ಈಗ  ಬೆಲೀನೇ ಎದ್ದು ಹೊಲ ಮೇಯುವ  ಕೆಲಸ ಮಾಡಿದೆ. ಬಿಬಿಎಂಪಿ ನಗರದ ಕೆಲವು ಸ್ಥಳಗಳನ್ನ ಆಕ್ರಮಿಸಿಕೊಂಡಿದಲ್ಲದೇ. ಈಗ ಬೆಂಗಳೂರು ವಿವಿಯ ಜಾಗವನ್ನು ದೇಗುಲ ನಿರ್ಮಾಣ ಮಾಡುವ ನೆಪದಲ್ಲಿ ಆಕ್ರಮಿಸಿಕೊಳ್ಳಲು ಮುಂದಾಗಿದೆ.
 
ಈಗ ಬೆಂ.ವಿಶ್ವ ವಿಶ್ವವಿದ್ಯಾಲಯ ಸುದ್ದಿಯಲ್ಲಿರುವುದಕ್ಕಿಂತ ವಿಶ್ವವಿದ್ಯಾಲಯ ಸುದ್ದಿಯಾಗುವಂತೆ ಬಿಬಿಎಂಪಿ ಮಾಡಿದೆ. ಬೆಂಗಳೂರಿನ ಜಾಗವನ್ನೆಲ್ಲ ಬಿಬಿಎಂಪಿ ಕಬಳಿಸಿದಲ್ಲದೇ ಈಗ ವಿವಿಯ ಜಾಗದ ಮೇಲೆ ತನ್ನ ಕಣ್ಣಿಟ್ಟಿದ್ದು, ಸದ್ದಿಲ್ಲದೇ ದೇವಾಸ್ಥನ ನಿರ್ಮಾಣ ಮಾಡಲು ಮುಂದಾಗಿದೆ. ಹೀಗಾಗಿ ವಿಷಯ ತಿಳಿದ ವಿದ್ಯಾರ್ಥಿಗಳು ವಿವಿಯಲ್ಲಿ ದೇವಸ್ಥಾನ ಬೇಡ್ವೇ ಬೇಡ ಗ್ರಂಥಾಲಯ ನಿರ್ಮಾಣ ಮಾಡಿ  ಎಂದು ಆಗ್ರಹಿಸುತ್ತಿದ್ದಾರೆ. ಕಳೆದ ಒಂದು ವಾರದಿಂದ ವಿವಿಯಲ್ಲಿ ದೇಗುಲ ಬೇಡ ಅಂತಾ ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದು, ಧರಣಿ ನಡೆಸಿದ್ದಾರೆ. ಕೊನೆಗೆ ರಾಜ್ಯಪಾಲರಿಗೂ ಪತ್ರ ಬರೆದಿದ್ದು,ರಾಜ್ಯಪಾಲರ ಅಂಗಳದವರೆಗೂ ವಿವಿಯ ಗಲಾಟೆ ತಲುಪಿದೆ. ಬಿಬಿಎಂಪಿ ಕೆಲಸದಿಂದ ಬೇಸರಗೊಂಡ ವಿದ್ಯಾರ್ಥಿಗಳು ದಿನಕ್ಕೊಂದು ಗಲಾಟೆ ಮಾಡ್ತಾ ಕೊನೆಗೆ ರಾಜ್ಯಪಾಲರಿಗೂ ಪತ್ರ ಬರೆದಿದ್ದಾರೆ. ಇಂದು ಕೂಡ ದೇಗುಲ ಬೇಡ ಅನ್ನುವ ಕೂಗು ವಿದ್ಯಾರ್ಥಿಗಳಿಂದ ಕೇಳಿಬರುತ್ತಿದೆ.
 
 ವಿಶ್ವವಿದ್ಯಾಲಯ ವಿದ್ಯಾರ್ಥಿಗಳು ಕೊನೆಗೂ ವಿವಿಯ ಕುಲಪತಿಗಳ ಹತ್ತಿರ ಹೋಗಿಯೂ ದೇಗುಲ ನಿರ್ಮಾಣದ ಕೆಲಸ ಸ್ಥಗಿತ ಮಾಡಿ ಅಂತಾ ಕೇಳಿಕೊಂಡಿದ್ದಾರೆ. ಆದ್ರು ಕೂಡ ಕೆಲಸ ಮಾತ್ರ ನಿಂತಿಲ್ಲ. ಬಿಬಿಎಂಪಿ ತನ್ನ ಕೆಲಸವನ್ನ ಮಾಡ್ತಿದೆ.ಬಿಬಿಎಂಪಿ ಅದೆನ್ನು ಪ್ಲಾನ್ ಮಾಡಿಕೊಂಡು ಮುಂದೆ ಬಂದಿದಿಯೋ ? ದೇಗುಲ ನಿರ್ಮಾಣ ಮಾಡಲೇಬೇಕೆಂಬ ಪಟ್ಟು ಹಿಡಿದಿದೆ .ಇನ್ನು  ಇತ್ತ ಒಂದು ಕಡೆ ವಿದ್ಯಾರ್ಥಿಗಳು ಧರಣಿ ನಡೆಸ್ತಿದಾರೆ, ಮತ್ತೊಂದು ಕಡೆ ಬಿಬಿಎಂಪಿ ಹಠಕ್ಕೆ ಬಿದ್ದಿದೆ , ಈಗ ಬೆಂ ವಿ.ವಿಯಲ್ಲಿ ದೇವರನನ್ನು ಮುಂದಿಟ್ಟುಕೊಂಡು ವಿಶ್ವವಿದ್ಯಾಲಯದ ಬೆಲೆಬಾಳುವ ಭೂಮಿಯನ್ನು ಕಬಳಿಸಲು ಮುಂದಾಗಿದೆ. ಇನ್ನು ವಿವಿಯಲ್ಲಿ ವಿಧ್ಯಾರ್ಥಿಗಳು ವಿರೋಧದ ನಡುವೆಯೂ ಕಾಮಗಾರಿ ಬಾರದಿಂದ ಸಾಗುತ್ತಿದೆ. ರಾತ್ರೋ ರಾತ್ರಿ ಕಾಮಗಾರಿ ನಡೆಯುತ್ತಿದ್ದು, ಸ್ಥಳದಲ್ಲಿ ಯಾರು ಪ್ರವೇಶಿಸಿದಂತೆ ನಿರ್ಭಂಧ ಏರಲಾಗಿದೆ. ಅಷ್ಟೇ ಅಲ್ಲದೆ ದೇಗುಲ ನಿರ್ಮಾಣದ ಜಾಗದಲ್ಲಿ  ಬ್ಯಾರಿಕೇಡ್ ಮತ್ತು ಕೆ,ಎಸ್,ಆರ್,ಪಿ ತುಕಡಿ ಹಾಗೂ 30 ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ