ನಾಳೆಯ ಗಣೇಶ ವಿಸರ್ಜನೆಗೆ ಬಿಬಿಎಂಪಿ ವತಿಯಿಂದ ಸಕಲ ಸಿದ್ದತೆ
ಯಡಿಯೂರು ಕೆರೆ, ಸ್ಯಾಂಕಿ ಕೆರೆ ಬಳಿ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ. ಗಣೇಶ ಮೂರ್ತಿ ವಿಸರ್ಜನೆಗೆ ಪ್ರತ್ಯೇಕ ಕಲ್ಯಾಣಿ ವ್ಯವಸ್ಥೆ ಬೆಳಗ್ಗೆ 10 ರಿಂದ ರಾತ್ರಿ 9 ರವರೆಗೆ ಗಣೇಶ ವಿಸರ್ಜನೆಗೆ ಅವಕಾಶ ಮಾಡಲಾಗಿತ್ತು.ಪಿಒಪಿ ಗಣೇಶ ಮೂರ್ತಿಗಳ ವಿಸರ್ಜನೆ ನಿಷಿದ್ಧ ಮಾಡಿದ್ದು, ಸ್ಥಳದಲ್ಲಿ ಸಿಸಿಟಿವಿ, ಲೈಟ್ ಗಳ ಅಳವಡಿಕೆ ಮಾಡಲಾಗಿದೆ.ನುರಿತ ಈಜುಗಾರರಿಂದ ಗಣೇಶ ಮೂರ್ತಿ ವಿಸರ್ಜನೆ ಕಲ್ಯಾಣಿ ಸುತ್ತ ಬ್ಯಾರಿಕೇಡ್ ಅಳಡಿಕೆ ವ್ಯವಸ್ಥೆ ಮಾಡಲಾಗಿದೆ.ಕೆರೆಗಳ ಬಳಿ ಸಿಬ್ಬಂದಿ, ಮಾರ್ಷಲ್ ಗಳ ನೇಮಕ ಸಹ ಮಾಡಲಾಗಿದೆ.4 ಅಡಿ ಗಣೇಶ ಮೂರ್ತಿಯ ವಿಸರ್ಜನೆಗೆ ಮಾತ್ರ ಅವಕಾಶ ಇದ್ದು, ಯಾವುದೇ ಅಹಿತಕರ ಘಡನೆ ನಡೆಯದಂತೆ ಬಿಬಿಎಂಪಿಯಿಂದ ಸಕಲ ಸಿದ್ದತೆ ಮಾಡಿಕೊಂಡಿದೆ