ಬೆಂಗಳೂರಿನಲ್ಲಿ ಕಸದ ಲಾರಿ ಹರಿದು ಡೆಲಿವರಿ ಬಾಯ್ ಸಾವು
ಕಸದ ಲಾರಿ ಹರಿದ ಪರಿಣಾಮ ಡೆಲಿವರಿ ಬಾಯ್ ಮೃತಪಟ್ಟ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ ಸಂಭವಿಸಿದೆ.
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ದೇವಣ್ಣ (25) ಮೃತಪಟ್ಟ ಯುವಕ.
ಥಣಿಸಂದ್ರದ ಮೇಲ್ಸೆತುವೆ ಮೇಲೆ ಶನಿವಾರ ಈ ಘಟನೆ ಸಂಭವಿಸಿದ್ದು, ಲಾರಿ ಚಾಲಕ ದಿನೇಶ್ ನಾಯ್ಕ್ (40) ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಕಳೆದ ಒಂದು ತಿಂಗಳಲ್ಲಿ ಕಸದ ಲಾರಿಗೆ ಬಲಿಯಾದವರ ಸಂಖ್ಯೆ ೪ಕ್ಕೇರಿದೆ. ಕಿರುತೆರೆ ನಟಿಯೊಬ್ಬರ ಪುತ್ರಿ ಮೃತಪಟ್ಟ ಘಟನೆ ನಂತರವೂ ಲಾರಿ ಚಾಲಕರು ಎಚ್ಚೆತ್ತುಕೊಳ್ಳದೇ ಇರುವುದು ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ.
ನಾಗರವಾರದಿಂದ ಹೆಗ್ಗಡೆ ನಗರಕ್ಕೆ ಹೋಗುತ್ತಿದ್ದಾಗ ಹಿಂದಿನಿಂದ ಬಂದ ಬಿಬಿಎಂಪಿ ಡಿಕ್ಕಿ ಹೊಡೆದ ಪರಿಣಾಮ ದೇಣ್ಣ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.