ಬೆಂಗಳೂರು ನಗರ ಜಿಲ್ಲೆಯ 5 ತಾಲೂಕುಗಳಲ್ಲಿ ಒತ್ತುವರಿ ಮಾಡಲಾಗಿದ್ದ ಕೆರೆ, ಕುಂಟೆ, ಗೋಮಾಳ, ಸ್ಮಶಾನ, ರಾಜಕಾಲುವೆ ಮತ್ತು ಇತರೆ ಸರ್ಕಾರಿ ಜಮೀನುಗಳ ಒತ್ತುವರಿ ತೆರವು ಮಾಡಲಾಗಿದೆ.
ಬೆಂಗಳೂರು ನಗರ ಜಿಲ್ಲೆಯಲ್ಲಿ 0.11 ವಿಸ್ತೀರ್ಣದ ಒಟ್ಟು ಎರಡು ಸರ್ಕಾರಿ ಕೆರೆಗಳು ಒತ್ತುವರಿಯಾಗಿದ್ದು ಅದರ ಅಂದಾಜು ಸುಮಾರು 55 ಲಕ್ಷ ರೂ. ಮೌಲ್ಯವಾಗಿದೆ. ಬೆಂಗಳೂರು ದಕ್ಷಿಣ ತಾಲೂಕಿನ ಕೆಂಗೇರಿ ಹೋಬಳಿಯ ಅಗರ ಗ್ರಾಮದ 0.06 ವಿಸ್ತೀರ್ಣದ 30 ಲಕ್ಷ ರೂ. ಹಾಗೂ ಅನೇಕಲ್ ತಾಲೂಕಿನ ಕಸಬಾ ಹೋಬಳಿಯ ಬ್ಯಾಗಡದೇನಹಳ್ಳಿ ಗ್ರಾಮದ 0.05 ವಿಸ್ತೀರ್ಣದ 25 ಲಕ್ಷ ರೂ. ಮೌಲ್ಯದ ಕೆರಗಳ ಒತ್ತುವರಿ ಮಾಡಿ ತೆರವುಗೊಳಿಸಲಾಗಿದೆ.
ಬೆಂಗಳೂರು ನಗರ ಜಿಲ್ಲೆಯಲ್ಲಿ 1.35 ವಿಸ್ತೀರ್ಣದ ಒಟ್ಟು ಎರಡು ನಕಾಶೆ ದಾರಿ ಒತ್ತುವರಿಯಾಗಿದ್ದು ಅದರ ಅಂದಾಜು ಸುಮಾರು 95 ಲಕ್ಷ ರೂ. ಮೌಲ್ಯವಾಗಿದೆ. ಆನೇಕಲ್ ತಾಲ್ಲೂಕಿನ ಕಸಬಾ ಹೋಬಳಿಯ ಗೆರೆಟಗನಬೆಲೆ ಗ್ರಾಮದ 1-20 ವಿಸ್ತೀರ್ಣದ ರೂ.75 ಲಕ್ಷ ಹಾಗೂ ಅತ್ತಿಬೆಲೆ ಹೋಬಳಿಯ ಕೂಡ್ಲೀಪುರ ಗ್ರಾಮದ 0-15 ವಿಸ್ತೀರ್ಣದ 20 ಲಕ್ಷ ರೂ. ಮೌಲ್ಯದ ನಕಾಶೆ ದಾರಿ ಒತ್ತುವರಿ ಮಾಡಿ ತೆರವು ಮಾಡಲಾಗಿದೆ.