ಬಿಬಿಎಂಪಿ ಮೇಯರ್ ಆಗಿ ಸಂಪತ್‌ರಾಜ್, ಉಪಮೇಯರ್ ಪದ್ಮಾವತಿ ಆಯ್ಕೆ

ಗುರುವಾರ, 28 ಸೆಪ್ಟಂಬರ್ 2017 (12:51 IST)
ಬಿಬಿಎಂಪಿ ನೂತನ ಮೇಯರ್ ಆಗಿ ಕಾಂಗ್ರೆಸ್ ಪಕ್ಷದ ಸಂಪತ್‌ರಾಜ್, ಉಪಮೇಯರ್ ಆಗಿ ಜೆಡಿಎಸ್ ಪಕ್ಷದ ಪದ್ಮಾವತಿ ನರಸಿಂಹಮೂರ್ತಿ ಆಯ್ಕೆಯಾಗಿದ್ದಾರೆ. 
ಪ್ರಾದೇಶಿಕ ಆಯುಕ್ತೆ, ಚುನಾವಣಾಧಿಕಾರಿ ಎಂ.ವಿ. ಜಯಂತಿ ಬಿಬಿಎಂಪಿ ಮೇಯರ್ ಉಪಮೇಯರ್ ಪ್ರಕ್ರಿಯೆಗೆ ಚಾಲನೆ ನೀಡಿದರು. ಬಿಬಿಎಂಪಿ ಸದಸ್ಯರು ಅಭ್ಯರ್ಥಿಗಳ ಪರ ಕೈ ಎತ್ತುವ ಮೂಲಕ ಬೆಂಬಲ ಸೂಚಿಸಿದರು.
 
ಬಿಬಿಎಂಪಿಯ 51 ನೇ ಮೇಯರ್ ಆಗಿ ಕಾಂಗ್ರೆಸ್ ಪಕ್ಷದ ಸಂಪತ್‌ರಾಜ್, ಉಪಮೇಯರ್ ಆಗಿ ಜೆಡಿಎಸ್ ಪಕ್ಷದ ಪದ್ಮಾವತಿ ನರಸಿಂಹಮೂರ್ತಿಯಾಗಿದ್ದಾರೆ ಎಂದು ಪ್ರಾದೇಶಿಕ ಆಯುಕ್ತೆ ಜಯಂತಿ ಘೋಷಿಸಿದರು. 
 
ದೇವರಜೀವನಹಳ್ಳಿ ವಾರ್ಡ್ ಕಾರ್ಪೋರೇಟರ್ ಆಗಿರುವ ಸಂಪತ್‌ರಾಜ್ ಪರವಾಗಿ 139 ಮತಗಳು ಬಂದಿವೆ. ಸಂಪತ್ 27-09-2018 ರವರೆಗೆ ರಾಜ್ಯಭಾರ ಮಾಡಲಿದ್ದಾರೆ. 50ನೇ ಉಪಮೇಯರ್ ಆಗಿ ಪದ್ಮಾವತಿ ರಾಜ್ಯಭಾರ ಮಾಡಲಿದ್ದಾರೆ.   
 
ಬಿಜೆಪಿ ಪಕ್ಷದಿಂದ ಮೇಯರ್ ಸ್ಥಾನಕ್ಕೆ ಮನಿಸ್ವಾಮಿ ಉಪಮೇಯರ್ ಸ್ಥಾನಕ್ಕೆ ಮಮತಾ ವಾಸುದೇವ್ ನಾಮಪತ್ರ ಸಲ್ಲಿಸಿದ್ಗರು. ಬಿಜೆಪಿ ಸಭಾತ್ಯಾಗ ಮಾಡಿದ ಹಿನ್ನೆಲೆಯಲ್ಲಿ ಮಮತಾ ಪರ ಒಂದು ಮತ ಚಲಾಯಿಸಲಾಗಲಿಲ್ಲ ಎಂದು ಮೂಲಗಳು ತಿಳಿಸಿವೆ.
 
ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಅನಂತ್ ಕುಮಾರ್, ಡಿ.ವಿ.ಸದಾನಂದಗೌಡ, ಸಂಸದ ರಾಮಕೃಷ್ಣ ಹಾಜರಾಗಿದ್ದರೆ ರಾಜೀವ್ ಚಂದ್ರಶೇಖರ್ ಗೈರುಹಾಜರಾದರು.  
 
ಬಿಬಿಎಂಪಿಯಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಜೆಡಿಎಸ್ ರಾಜ್ಯಾದ್ಯಕ್ಷ ಎಚ್.ಡಿ.ಕುಮಾರಸ್ವಾಮಿ ತಿಕ್ಕಾಟದ ಮಧ್ಯೆಯೂ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮುಂದುವರಿದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ