ಬಿಬಿಎಂಪಿ ಇದೇ ಮೊದಲ ಬಾರಿಗೆ ಆಸ್ತಿಗಳ ಡಿಜಟಲೀಕರಣಕ್ಕೆ ಮುಂದು

ಶನಿವಾರ, 25 ನವೆಂಬರ್ 2023 (14:21 IST)
ಬಿಬಿಎಂಪಿ ಇದೇ ಮೊದಲ ಬಾರಿಗೆ ಆಸ್ತಿಗಳ ಡಿಜಟಲೀಕರಣಕ್ಕೆ ಪಾಲಿಕೆ ಮುಂದಾಗಿದೆ.ಪಾಲಿಕೆಯ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ನಗರದ ಅಷ್ಟೂ ಅಸ್ತಿಗಳ ಡಿಜಟಲೀಕರಣಕ್ಕೆ ಈಗಾಗಲೇ ಬಿಬಿಎಂಪಿ ಚಾಲನೆ ನೀಡಿದೆ.ಬಿಬಿಎಂಪಿ ಆಸ್ತಿಗಳ ಡಿಜಿಟಲೀಕರಣಕ್ಕೆ ಪಾಲಿಕೆ ಸಿದ್ದತೆ ನಡೆಸಿದೆ.2024ರ ಜನವರಿಯೊಳಗೆ ಯಲಹಂಕ ವಲಯದಲ್ಲಿರೋ ಅಷ್ಟೂ ಆಸ್ತಿಗಳ ಡಿಜಿಟಲೀಕರಣ ಕಾರ್ಯ ಕಂಪ್ಲೀಟ್ ಆಗಿದೆ.
 
ಅಕ್ರಮಗಳನ್ನು ತಡೆಗಟ್ಟೋದಕ್ಕೆ ಹೊಸ ಪದ್ದತಿ ಅನಿವಾರ್ಯವಾಗಿದೆ.20 ಲಕ್ಷ ಆಸ್ತಿಗಳ ಮಾಲೀಕರು ಸಹಕರಿಸುವಂತೆ ಆಯುಕ್ತರ ಮನವಿ ಮಾಡಿದ್ದಾರೆ.ಉಳಿದ 7 ವಲಯಗಳ ಆಸ್ತಿಗಳ ಡಿಜಿಟಲೀಕರಣ ಮಾರ್ಚ್ ಅಂತ್ಯದೊಳಗೆ ಮುಕ್ತಾಯವಾಗಲಿದೆ ಎನ್ನಲಾಗಿದೆ.ಆಸ್ತಿ ತೆರಿಗೆ ರಶೀದಿ ಹಾಗು ಬೆಸ್ಕಾಂ ಬಿಲ್ ರಶೀದಿ ಪ್ರತಿ ನೀಡಬೇಕು.ಪಾಲಿಕೆಯ ದಾಖಲೆಗಳಲ್ಲಿ ತಪ್ಪು ಮಾಹಿತಿ ಇದ್ದರೆ ಸರಿ ಮಾಡಿಸಿಕೊಳ್ಳಬೇಕು.ಈಗಾಗಲೇ ನಗರದ ಕೆಲ ಸಾರ್ವಜನಿಕರ ಮೊಬೈಲ್‌ಗಳಿಗೆ ಪಾಲಿಕೆಯಿಂದ ಎಸ್ಎಂಎಸ್‌ ನೀಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ