ಮಿಲಿಟರಿ ಸೇನೆಗೆ ಭೂಮಿ ನೀಡಲು ಮುಂದಾದ ಬಿಬಿಎಂಪಿ

ಶುಕ್ರವಾರ, 10 ಆಗಸ್ಟ್ 2018 (14:59 IST)
ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ  ತಮ್ಮನಾಯಕನಹಳ್ಳಿಯಲ್ಲಿರುವ ಸರ್ಕಾರಿ ಗೋಮಾಳ ಭೂಮಿಯನ್ನು ಮಿಲಿಟರಿ ಸೇನೆಗೆ ನೀಡಲು ಬಿಬಿಎಂಪಿ ಮುಂದಾಗಿದೆ. ಬೆಳ್ಳಂಬೆಳ್ಳಗ್ಗೆ  ಬಿಬಿಎಂಪಿ ಮೇಯರ್ ಸಂಪತ್ ರಾಜ್, ಆಯುಕ್ತರ ಮಂಜುನಾಥ್ ಪ್ರಸಾದ್, ಹಾಗೂ ಜಿಲ್ಲಾದಿಕಾರಿ ವಿಜಯ ಶಂಕರ್ ಮತ್ತು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಮಹೇಂದ್ರ ಜೈನ್ ಸ್ಥಳಕ್ಕೆ ಬೇಟಿ ನೀಡಿ ಈ ವಿಚಾರವಾಗಿ ಪರೀಶಿಲನೆ ನಡೆಸಿದ್ದಾರೆ.

ತಮ್ಮನಾಯಕನಹಳ್ಳಿ ಸರ್ವೆ ನಂ 23 ರಲ್ಲಿನ 206 ಎಕರೆ ಜಾಗವನ್ನ ಮಿಲಿಟರಿಗೆ ಹಸ್ತಾಂತರ ಮಾಡಲು  ಅಧಿಕಾರಿಗಳು ಆಗಮಿಸಿದ್ದು, ಇದಕ್ಕೆ ಸ್ಥಳೀಯ ರೈತರು ವಿರೋಧ ವ್ಯಕ್ತಪಡಿಸಿದ್ದಾರೆ. ಸ್ಥಳೀಯ ರೈತರು ಇದೇ ಗೊಮಾಳ ಜಾಗದಲ್ಲಿ ಸುಮಾರು ಮೂವತ್ತು ವರ್ಷಗಳಿಂದ  ಕೃಷಿ ಚಟುವಟಿಕೆ ನಡೆಸುತ್ತಿದ್ದರು. ನಂತರ ಈ  ಜಾಗವನ್ನು ಬಿಬಿಎಂಪಿ ಕಸ ವಿಲೇವಾರಿಗೆಂದು ಗುರ್ತಿಸಿತ್ತು.‌ ಆದರೆ ಸ್ಥಳೀಯರು ಕೃಷಿ ಚಟುವಟಿಕೆ ನಡೆಸುತ್ತಿದ್ದು, ಜೊತೆಗೆ  ಈ ಜಾಗ ಬನ್ನೇರುಘಟ್ಟ ಅಭಯಾರಣ್ಯಕ್ಕೆ ಹೊಂದಿಕೊಂಡಿರುವುದರಿಂದ ಕಸ ಹಾಕುವ ಯೋಜನೆ ಕೈ ಬಿಟ್ಟು ಇದೀಗ ಸೇನೆಗೆ ಒಪ್ಪಿಸಲು ಬಿಬಿಎಂಪಿ ಮುಂದಾಗಿದೆ. ಆದ್ದರಿಂದಾಗಿ ಈ ಜಾಗವನ್ನು ಮಿಲಿಟರಿಗೆ ನೀಡಲು ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ