2023 ನೇ ಸಾಲಿನ ಬಿಬಿಎಂಪಿ ಬಜೆಟ್ ನಲ್ಲಿ ಕರಗ ಉತ್ಸವಕ್ಕೆ ಅನುದಾನ ಕಡಿತಗೊಳಿಸದಂತೆ ಬಿಬಿಎಂಪಿ ಆಯುಕ್ತರಿಗೆ ಮನವಿ ಮಾಡಲಾಗಿದೆ.ಬಿಬಿಎಂಪಿ ಆಯುಕ್ತರನ್ನ ಭೇಟಿಯಾಗಿ ಮನವಿ ಸಲ್ಲಿಸಿದ ಧರ್ಮರಾಯಸ್ವಾಮಿ ಕರಗ ಸಮಿತಿ ಮನವಿ ಸಲ್ಲಿಸಿದೆ.ಪ್ರತೀ ವರ್ಷ ಬಜೆಟ್ ನಲ್ಲಿ ಒಂದು ಕೋಟಿ 50 ಲಕ್ಷ ಹಣವನ್ನ ಕರಗೋತ್ಸವಕ್ಕೆ ಮೀಸಲಿಡಲಾಗ್ತಿತ್ತು.ಈ ಬಾರಿ ಬಜೆಟ್ ನಲ್ಲಿ 1 ಕೋಟಿಗೆ ಕಡಿತಗೊಳಿಸಿರೋದು ಬಜೆಟ್ ಕರಡು ಪ್ರತಿಯಲ್ಲಿ ತಿಳಿದು ಬಂದ ಹಿನ್ನೆಲೆ ಆಯುಕ್ತರನ್ನ ಭೇಟಿಯಾಗಿ ಸಮಿತಿ ಮನವಿ ಸಲ್ಲಿಸಿದೆ.