ಬಿಬಿಎಂಪಿ ಎಡವಟ್ಟು ಸಾರ್ವಜನಿಕ ಕೆಂಗಣ್ಣಿಗೆ ಗುರಿ..!

ಮಂಗಳವಾರ, 1 ಆಗಸ್ಟ್ 2023 (20:37 IST)
ಅನಧಿಕೃತ ಸೀಟ್ ಗಳನ್ನು ತೆಗೆಯಲು ಹೋಗಿದ ಪಾಲಿಕೆಗೆ ಸಂಕಷ್ಟ ಎದುರಾಗಿದೆ.ದೇವಸ್ಥಾನದ ಗೋಡೆಯನ್ನು ಬಿಬಿಎಂಪಿ ಕೆಡವಿದೆ.ಧರ್ಮರಾಯಸ್ವಾಮಿ ದೇವಸ್ಥಾನ ಹತ್ತಿರ ಇರುವ ಗಂಗಾಧರೇಶ್ವರ ದೇವಾಲಯ ದಕ್ಕೆ ಉಂಟಾಗಿದೆ.ಅಲ್ಲದೇ ಎಸ್ ಪಿ ರೋಡ್ ನಲ್ಲಿ ಇರುವ ಅನಧಿಕೃತ ಶೀಟ್ ತೆರವಿಗೆ ಪಾಲಿಕೆ ಮುಂದಾಗಿದ್ದು,ಗಂಗಾಧರೇಶ್ವರ ದೇವಸ್ಥಾನ ಗೋಡೆಗೆ ದಕ್ಕೆ ಉಂಟಾಗಿರುವುದಕ್ಕೆ ಕೆಂಡಾಮಂಡಲವಾದ ಸಾರ್ವಜನಿಕರು ರಸ್ತೆ ತಡೆ ಹಿಡಿದು ಆಕ್ರೋಶ ವ್ಯಕ್ತಪಡಿಸಿದಾರೆ.
 
 ಎಪತ್ತು ವರ್ಷದಿಂದ ನಾವು ಇಲ್ಲಿ ಅಂಗಡಿ ಇಟ್ಟಿದ್ದಿವಿ.ಯಾವತ್ತು ಸಮಸ್ಯೆಯಾಗಿಲ್ಲ.ಇವತ್ತು ಬಿಬಿಎಂಪಿ ಅಧಿಕಾರಿಗಳು ಹೇಳ್ದೆ ಕೇಳ್ದೆ ಬಂದು ತೆರವು ಮಾಡಿದ್ದಾರೆ.ಒಂದು ನೋಟಿಸ್ ಕೂಡ ನೀಡಿಲ್ಲ. ಬಡವರ ಹೊಟ್ಟೆ ಮೇಲೆ ಹೊಡೆದ್ರೆ ಏನು ಮಾಡೋದು ನಾವು ದುಡಿದು ತಿನ್ನೊ ಜನ ಅಂತ ಅಂಗಡಿ ಮಾಲೀಕರು ಕಣ್ಣೀರು ಹಾಕಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ