ಮಳೆ ಅನಾಹುತಗಳ ಬಗ್ಗೆ ನಿರ್ಲಕ್ಷ್ಯ ವಹಿಸಿತಾ ಪಾಲಿಕೆ?

ಗುರುವಾರ, 27 ಜುಲೈ 2023 (16:30 IST)
ನಿನ್ನೆ ರಾತ್ರಿ ಸಂಪಂಗಿ ರಾಮನಗರದಲ್ಲಿ ಮರ ಧರೆಗುರುಳಿರುವ ಘಟನೆ ಬಿಷಪ್ ಕಾಟನ್ ಶಾಲೆ ಹಿಂಭಾಗದ ರಸ್ತೆಯಲ್ಲಿ ನಡೆದಿದೆ.ರಾತ್ರಿ ಮರ ಬಿದ್ದರೂ ಇನ್ನೂ  ಪಾಲಿಕೆ ತೆರವು ಮಾಡಿಲ್ಲ.ಮರ ಬಿದ್ದಿದ್ದರಿಂದ ವಾಹನಗಳ ಸಂಚಾರಕ್ಕೆ ಸಮಸ್ಯೆಯಾಗಿದೆ.ಈಗಾಗಲೇ ಬೀಳುವ ಹಂತದಲ್ಲಿರುವ ಮರ ತೆರವಿಗೆ ಆದೇಶ ಮಾಡಿದ್ರು.ಮರಗಳನ್ನ ಗುರ್ತಿಸದೇ ನಿದ್ದೆಗೆ ಬಿಬಿಎಂಪಿ ಜಾರಿದೆ.ಹಲವೆಡೆ ಮರ ಬಿದ್ದು ಅನಾಹುತ ಆಗಿದ್ರೂ ಪಾಲಿಕೆ ಎಚ್ಚೆತ್ತುಕೊಂಡಿಲ್ಲ.ಮರ ಬಿದ್ದು ಅನಾಹುತ ಆದ್ರೆ ಹೊಣೆ ಹೊರುತ್ತಾ ಪಾಲಿಕೆ?ಮಳೆಗಾಲಕ್ಕೆ ತಯಾರಿ ಮಾಡಿದ್ದೇವೆ ಅನ್ನೋ ಆಯುಕ್ತರು,ಆದ್ರೆ ಬೀಳೋ ಹಂತದಲ್ಲಿರೋ ಮರಗಳನ್ನ ಗುರ್ತಿಸೋದರಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ.ಯಾರಿಗಾದರೂ ಅಪಾಯ ಆದ್ರೆ ಪಾಲಿಕೆಯೇ ನೇರ ಹೊಣೆಯಾಗಲಿದೆ.ಮಳೆಗಾಲದಲ್ಲಿ ನಿದ್ದೆ ಮಾಡ್ತಿದ್ದಾರಾ ಅಧಿಕಾರಿಗಳು ಅಂತಾ ಸಾರ್ವಜನಿಕರು ಪ್ರಶ್ನೆ ಮಾಡ್ತಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ