5 ಲಕ್ಷ ಕೋವಿಡ್ ವ್ಯಾಕ್ಸಿನ್ ನೀಡಲು ತಯಾರಾದ ಬಿಯೆಸ್ , ರಾಜಧಾನಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಪ್ರಯುಕ್ತ ನಗರದ ಬೌರಿಂಗ್ ಆಸ್ಪತ್ರೆ ಆವರಣದಲ್ಲಿ ಕೋವಿಡ್ ವ್ಯಾಕ್ಸಿನ್ ಕ್ಯಾಂಪೇನ್ ಮಾಡಲಾಗಿತ್ತು. ಇನ್ನೂ ಈ ಒಂದು ಅಭಿಯಾನಕ್ಕೆ ಆರೋಗ್ಯ ಸಚಿವ ಡಾ. ಸುಧಾಕರ್ ಚಾಲನೆ ನೀಡಿದ್ರು.ಬೆಂಗಳೂರಿನಾದ್ಯಂತ 5 ಲಕ್ಷ ಕೋವಿಡ್ ವ್ಯಾಕ್ಸಿನ್ ನೀಡಲು ಬಿಬಿಎಂಪಿ ತಯಾರಿ ನಡೆಸಿದ್ದು, ರಾಜ್ಯದಲ್ಲಿಂದು 30 ಲಕ್ಷ ಲಸಿಕೆ ನೀಡಲು ಸರ್ಕಾರ ಟಾರ್ಗೆಟ್ ಮಾಡಿದೆ.ಇನ್ನೂ ಇಂದು ಒಂದು ದಿನದ ಮಟ್ಟಿಗೆ ಮಾತ್ರ ವ್ಯಾಕ್ಸಿನ್ ನೀಡುವ ಕೆಲಸ ಆಗಬಾರದು. ಪ್ರತಿನಿತ್ಯ ಹೀಗೆ ವ್ಯಾಕ್ಸಿನ್ ಅಭಿಯಾನ ನಡೆಯಬೇಕು. ಆಗ ವ್ಯಾಕ್ಸಿನ್ ಕೊರತೆ ಯಾರಿಗೂ ಆಗಲ್ಲ. ಪ್ರತಿಯೊಬ್ಬರಿಗೂ ಸಂಜೀವಿನಿ ಸಿಗುತ್ತೆ ಎಂದು ಸಾರ್ವಜನಿಕರು ಹೇಳಿದ್ರು.ಒಟ್ನಲಿ ವ್ಯಾಕ್ಸಿನ್ ಕೊರತೆ ಈಗ ನಿಗಿದೆಯಾದ್ರು .ಪ್ರತಿನಿತ್ಯ ಜನರಿಗೆ ಸಂಜೀವಿನಿ ಸಿಕ್ಕರೆ ಇನ್ನಷ್ಟು ಅನುಕೂಲವಾಗಲಿದೆ