ಕೋವಿಡ್ ಹಾಗೂ ಲಾಕ್‌ಡೌನ್‌ನಿಂದಾಗಿ ಅನೇಕ ತಿಂಗಳು ದುಡಿಮೆಯಿಲ್ಲದೇ ಬದುಕು ಸಾಗಿಸಿ, ದುಬಾರಿ ಶಾಲಾ ಶುಲ್ಕ ಕಟ್ಟಬೇಕಾಗಿರುವ ಪೋಷಕರ ಕಷ್ಟ ಹೇಳತೀರದು. ಖಾಸಗಿ ಶಾಲೆಗಳ ಶುಲ್ಕವನ್ನು ಶೇ. ೩೦ರಷ್ಟು ಇಳಿಸಬೇಕು ಹಾಗೂ ಅಲ್ಲಿನ ಶಿಕ್ಷಕರಿಗೆ ಲಾಕ್‌ಡೌನ್ ಅವಧಿಯ ಸಂಬಳವನ್ನು ಸರ್ಕಾರ ನೀಡಬೇಕು. ಆದರೆ ಈಗ ರಾಜ್ಯ ಸರ್ಕಾರವು ನ್ಯಾಯಾಲಯದಲ್ಲಿ ತೋರಿದ ಉದಾಸೀನದಿಂದಾಗಿ, ಶೇ. ೧೫ರಷ್ಟು ಮಾತ್ರ ವಿನಾಯಿತಿ ಸಿಕ್ಕಿರುವುದು ಬೇಸರ ಉಂಟುಮಾಡಿದೆ.
ರಾಜ್ಯ ಸರ್ಕಾರದ ಬೇಜವಾಬ್ದಾರಿತನದಿಂದಾಗಿ, ಕಳೆದ ವರ್ಷ ಶೇ. ೩೦ರಷ್ಟು ವಿನಾಯಿತಿ ಪಡೆದಿದ್ದ ವಿದ್ಯಾರ್ಥಿಗಳಿಗೆ ಅದರಲ್ಲಿ ಅರ್ಧ ಭಾಗವನ್ನು ಈಗ ಕಟ್ಟಬೇಕಾದ ಆತಂಕ ಎದುರಾಗಿದೆ. ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರು ತಕ್ಷಣವೇ ಶಿಕ್ಷಣ ಹಾಗೂ ಕಾನೂನು ತಜ್ಞರ ಜೊತೆ ಸಭೆ ನಡೆಸಿ, ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸುವ ಕುರಿತು ಚರ್ಚಿಸಬೇಕು. ಖಾಸಗಿ ಶಾಲೆಗಳಿಗೆ ಅನ್ಯಾಯವಾಗದಂತೆ ಹಾಗೂ ಪೋಷಕರಿಗೆ ಹೊರೆಯಾಗದಂತೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ನಿರ್ಧಾರ ಕೈಗೊಳ್ಳಬೇಕು ಎಂದು ಎಎಪಿ ಅಧ್ಯಕ್ಷ ಮೋಹನ್ ದಾಸರಿ ಆಗ್ರಹಿಸಿದರು