ಬಿಬಿಎಂಪಿ ಟಫ್ ರೂಲ್ಸ್

ಬುಧವಾರ, 22 ಡಿಸೆಂಬರ್ 2021 (17:45 IST)
ಕೊರೊನಾ ರೂಪಾಂತರಿ ವೈರಸ್ ಓಮಿಕ್ರಾನ್‍ನಿಂದ ಮೂರನೆ ಅಲೆ ಭೀತಿ ಹಿನ್ನೆಲೆಯಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರ ಖಡಕ್ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಬಿಬಿಎಂಪಿ ಕಟ್ಟೆಚ್ಚರ ವಹಿಸಿದೆ.
ಓಮಿಕ್ರಾನ್ ಭೀತಿ ಹಿನ್ನೆಲೆಯಲ್ಲಿ ವಾರ್‍ರೂಂಗಳನ್ನು ಸಕ್ರಿಯಗೊಳಿಸಲು ಆದೇಶ ನೀಡಲಾಗಿದೆ. ಈ ಸಂಬಂಧ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ರಾಷ್ಟ್ರೀಯ ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜ್‍ಭೂಷಣ್ ಅವರು ಪತ್ರ ಬರೆದಿದ್ದಾರೆ. ಜಿಲ್ಲಾ ಹಾಗೂ ಸ್ಥಳೀಯ ಮಟ್ಟದಲ್ಲಿ ಮುನ್ನೆಚ್ಚರಿಕೆ ವಹಿಸಬೇಕು. ಟೆಸ್ಟಿಂಗ್ ಹಾಗೂ ಬೆಡ್ ವ್ಯವಸ್ಥೆ ಹೆಚ್ಚಿಸಬೇಕು.
 
ಈ ಹಿಂದೆ ಆರೋಗ್ಯ ಇಲಾಖೆ ನೀಡಿದ್ದ ಮಾರ್ಗಸೂಚಿಗಳನ್ನು ಪಾಲಿಸುವುದು, ಪ್ರತಿ ದಿನ ಕೋವಿಡ್ ಮಾಹಿತಿ ಪರಿಶೀಲನೆ ನಡೆಸುವುದು, ಕಂಟೋನ್ಮೆಂಟ್ ಝೋನ್‍ಗಳನ್ನು ಗುರುತಿಸಿ ತೀವ್ರ ನಿಗಾವಹಿಸುವ ಸೂಚನೆಗಳನ್ನು ನೀಡಿದೆ.
 
ಟೆಸ್ಟ್, ಟ್ರ್ಯಾಕ್, ಟ್ರೀಟ್, ವ್ಯಾಕ್ಸಿನೇಷನ್ ಹಾಗೂ ಕೊರೊನಾ ನಿಯಮಗಳನ್ನು ಪಾಲನೆ ಮಾಡಬೇಕು. ಅವಶ್ಯಕವಿದ್ದಲ್ಲಿ ನೈಟ್ ಕಫ್ರ್ಯೂ ಜಾರಿ ಮಾಡಬೇಕು. ಕೋವಿಡ್ ಕ್ಲಸ್ಟರ್‍ಗಳನ್ನು ಗುರುತಿಸಿ ಬಫರ್‍ಝೋನ್ ಹಾಗೂ ಕಂಟೈನ್ಮೆಂಟ್ ಝೋನ್ ಎಂದು ಅಸೂಚನೆ ಹೊರಡಿಸುವುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ