ಸರ್ಕಾರಿ ಗೋ ಶಾಲೆ ಉದ್ಘಾಟಿಸಿದ ಬಿ.ಸಿ ನಾಗೇಶ್

ಮಂಗಳವಾರ, 11 ಅಕ್ಟೋಬರ್ 2022 (09:13 IST)
ಮಡಿಕೇರಿ : ಮಡಿಕೇರಿಯ ಕೆ. ನಿಡುಗಡೆಯಲ್ಲಿ ನಿರ್ಮಾಣವಾಗಿರುವ ನೂತನ ಸರ್ಕಾರಿ ಜಿಲ್ಲಾ ಗೋಶಾಲೆಯನ್ನು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ ನಾಗೇಶ್ ಉದ್ಘಾಟಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಕೊಡಗು ಜಿಲ್ಲಾ ಪ್ರಾಣಿದಯಾ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ನಿರ್ಮಾಣವಾಗಿರುವ ಸರ್ಕಾರಿ ಗೋಶಾಲೆಯನ್ನು ಸಚಿವ ಬಿ.ಸಿ ನಾಗೇಶ್ ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು .

ಸುಮಾರು 8 ಎಕರೆ ಜಾಗದಲ್ಲಿ, 53 ಲಕ್ಷ ರೂ. ವೆಚ್ಚದಲ್ಲಿ ಗೋಶಾಲೆ ನಿರ್ಮಾಣವಾಗಿದೆ. ರಾಜ್ಯದ 2ನೇ ಸರ್ಕಾರಿ ಗೋ ಶಾಲೆ ಇದಾಗಿದ್ದು, 50ಕ್ಕೂ ಹೆಚ್ಚು ಜಾನುವಾರುಗಳನ್ನು ನೋಡಿಕೊಳ್ಳಲು ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ