ಇಂದಿನಿಂದ 10 ದಿನಗಳ ಕಾಲ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗುತ್ತಿದೆ.
ಒಮಿಕ್ರಾನ್ ಭೀತಿ ನಡುವೆಯೂ ಸದಸ್ಯರು ಕಲಾಪದಲ್ಲಿ ಭಾಗಿಯಾಗಲಿದ್ದಾರೆ. ಈ ಬಾರಿ ಸಾಕಷ್ಟು ವಿಷಯಗಳು ಚರ್ಚೆ ಆಗುವ ಸಾಧ್ಯತೆ ಇದೆ. ಮುಖ್ಯವಾಗಿ ಮತಾಂತರ ನಿಷೇಧ ಕಾಯ್ದೆ ಬಗ್ಗೆ ಚರ್ಚೆಯಾಗಲಿದ್ದು, ಈಗಾಗಲೇ ಇದಕ್ಕೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದೆ. ಹಾಗಾಗಿ ಸದನದಲ್ಲಿ ಗದ್ದಲ ಸಾಧ್ಯತೆ ಹೆಚ್ಚಿದೆ.
ಬಿಟ್ ಕಾಯಿನ್ ದಂಧೆ, ಗುತ್ತಿಗೆದಾರರಿಗೆ ಶೇ.40ರಷ್ಟು ಕಮಿಷನ್ ಬಗ್ಗೆಯೂ ಚರ್ಚೆಯಾಗಲಿದೆ.
ಕೋವಿಡ್ ಮತ್ತು ನೆರೆ ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು, ಅಕಾಲಿಕ ಮಳೆಯಿಂದ ರೈತರಿಗಾಗಿರುವ ಕಷ್ಟಕ್ಕೆ ಯಾವುದೇ ಪರಿಹಾರ ಸಿಕ್ಕಿಲ್ಲ ಎಂದು ವಿಪಕ್ಷಗಳು ಮಾತನಾಡಲು ತಯಾರಾಗಿವೆ.