ಎಂಇಎಸ್ ಸದಸ್ಯರು ನಾಡಗೀತೆಗೆ ಗೌರವ ಸಲ್ಲಿಸುವಂತೆ ಮಾಡಿದ ಜಿಲ್ಲಾಧಿಕಾರಿ
ಶನಿವಾರ, 24 ಜೂನ್ 2017 (15:11 IST)
ಮಹಾನಗರ ಪಾಲಿಕೆ ಸ್ಥಾಯಿ ಸಮಿತಿ ಸಭೆಯಲ್ಲಿ ಪಾಲಿಕೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ನಾಡಗೀತೆ ಮೊಳಗಿಸಿ ಜಿಲ್ಲಾಧಿಕಾರಿ ಎನ್.ಜಯರಾಂ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಮಹಾರಾಷ್ಟ್ರ ಏಕೀಕರಣ ಸಮಿತಿಯ ಸದಸ್ಯರಿಂದ ತೀವ್ರ ವಿರೋಧದಿಂದಾಗಿ ಈ ಹಿಂದೆ ಯಾವುದೇ ಸಭೆ ಸಮಾರಂಭಗಳಲ್ಲಿ ನಾಡಗೀತೆ ಮೊಳಗಿಸುತ್ತಿರಲಿಲ್ಲ. ಆದರೆ, ದಕ್ಷ ಅಧಿಕಾರಿ ಜಿಲ್ಲಾಧಿಕಾರಿ ಎನ್.ಜಯರಾಂ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.
ಪಾಲಿಕೆ ಸ್ಥಾಯಿ ಸಮಿತಿ ಸಭೆಯಲ್ಲಿ ನಾಡಗೀತೆ ಮೊಳಗಿಸುತ್ತಿದ್ದಂತೆ ಎಂಇಎಸ್ ಶಾಸಕರು ಮತ್ತು ಕಾರ್ಪೋರೇಟರ್‌ಗಳು ಎದ್ದು ನಿಂತು ಗೌರವ ಸಲ್ಲಿಸಿದರು.
ರಾಜ್ಯ ವಿರೋಧಿ ವರ್ತನೆ ತೋರಿದಲ್ಲಿ ಪಾಲಿಕೆಯನ್ನು ಸೂಪರ್ ಸೀಡ್ ಮಾಡುವುದಾಗಿ ಜಿಲ್ಲಾಧಿಕಾರಿ ಎನ್.ಜಯರಾಂ ಎಚ್ಚರಿಕೆ ನೀಡಿದ್ದರಿಂದ, ಸೂಪರ್‌ಸೀಡ್‌ಗೆ ಹೆದರಿದ ಎಂಇಎಸ್ ಶಾಸಕರು ಮತ್ತು ಕಾರ್ಪೋರೇಟರ್‌ಗಳು ನಾಡಗೀತೆಗೆ ಗೌರವ ಸಲ್ಲಿಸಿದ್ದಾರೆ.
ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಈ ಲಿಂಕ್ ಕ್ಲಿಕ್ ಮಾಡಿ.
http://kannada.fantasycricket.webdunia.com/
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.