ಕೋಳಿ ಎಸೆದು ಹರಕೆ ತೀರಿಸಿದ ಭಕ್ತರು

ಗುರುವಾರ, 9 ಆಗಸ್ಟ್ 2018 (19:41 IST)
ಹಲವು ಸಂಸ್ಕೃತಿಗಳ ಬೀಡಾಗಿರುವ ರಾಜ್ಯದಲ್ಲಿ ಒಂದೊಂದು ಕಡೆ ಬಗೆ ಬಗೆ ಹರಕೆಗಳನ್ನು ಭಕ್ತರು ತೀರಿಸುತ್ತಾರೆ. ಆದರೆ ಆ ಪ್ರದೇಶದಲ್ಲಿರುವ ದೇವಸ್ಥಾನದಲ್ಲಿ ಕೋಳಿ ಎಸೆದು ಭಕ್ತರು ತಮ್ಮ ಹರಕೆಗಳನ್ನು ತೀರಿಸಿದರು.

ಕಲಬುರಗಿ ಜಿಲ್ಲೆಯ ಚಿತ್ತಾಪುರ ಪಟ್ಟಣದ ಹೋಳಿಕಟ್ಟಾ ಹತ್ತಿರದ ಮರಗಮ್ಮ ದೇವಾಲಯದಲ್ಲಿ ಜಾತ್ರಾ ಮಹೋತ್ಸವ ಅಂಗವಾಗಿ ಅಪಾರ ಭಕ್ತರುಉ ಗೊಂಬಿಗಳ ಮೇಲೆ ಕೋಳಿ ಎಸೆದು ಹರಕೆ ಸಲ್ಲಿಸಿದರು.

ರೋಗದಿಂದ ಮುಕ್ತಿ, ರೋಗಗಳು ಬರದಂತೆ ಹಾಗೂ ಕಷ್ಟಗಳು ದೂರವಾಗುತ್ತವೆ ಎಂಬ ನಂಬಿಕೆಯಿಂದ ಭಕ್ತರು ಗೊಂಬಿಗಳ ಮೇಲೆ ಕೋಳಿಗಳನ್ನು ಎಸೆಯುವ ಮೂಲಕ ತಮ್ಮ ಹರಕೆ ತೀರಿಸುತ್ತಾರೆ. ಭಕ್ತರ ಆಕಾಂಕ್ಷೆ ಈಡೇರಿದಾಗ ಸ್ವಯಂ ಪ್ರೇರಿತವಾಗಿ ಕುಟುಂಬ ಸಹಿತ ಆಗಮಿಸಿ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ಎಸೆದ ಕೋಳಿಗಳನ್ನು ಹಿಡಿಯಲು ತಾ ಮುಂದು, ನಾ ಮುಂದು ಎಂದು ಭಕ್ತರು ಸೇರುತ್ತಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ