ಆ ಮಾರಿಯಮ್ಮಗೆ ಜನರು ಹರಕೆ ತೀರಿಸಿದ್ದು ಹೇಗೆ ಗೊತ್ತಾ?
ಗುರುವಾರ, 19 ಜುಲೈ 2018 (20:22 IST)
ಅಲ್ಲಿನ ಭಕ್ತರು ಹರಕೆಯ ನೆಪದಲ್ಲಿ ಮಾಡುತ್ತಿರುವುದು ಮೂಢನಂಬಿಕೆಯೋ .. ಇಲ್ಲ ಭಕ್ತಿಯ ಪರಕಾಷ್ಟೆಯೋ... ? ಆ ದೃಶ್ಯವನ್ನೊಮ್ಮೆ ನೋಡಿದರೆ ನಿಮ್ಗೂ ಸಹ ಈ ಪ್ರಶ್ನೆ ಸಹಜವಾಗಿ ಕಾಡುತ್ತೆ . ಅಲ್ಲಿನ ದೇವರಿಗೆ ಹರಕೆ ಹೊತ್ತ ಜನ ತಮ್ಮ ಬೆನ್ನು ಮೂಳೆಗಳಿಗೆ ಕಬ್ಬಿಣದ ಕೊಕ್ಕಿಗಳನ್ನು ಹಾಗೂ ಚೂಪಾದ ಕತ್ತಿಗಳನ್ನು ಚುಚ್ಚಿಕೊಂಡು ವಿಶಿಷ್ಟ ರೀತಿಯಲ್ಲಿ ತಮ್ಮ ಹರಕೆಯನ್ನು ಈಡೇರಿಸುತ್ತಾರೆ . ಹಾಗಾದ್ರೆ ವಿಶಿಷ್ಟ ಆಚರಣೆ ಇರೋ ದೇವಾಲಯ ಯಾವುದು , ಆ ದೇವರ ಹೆಸರೇನೂ ಎಂಬ ಕುತೂಹಲಕ್ಕಾಗಿ ಮುಂದೆ ಓದಿ…
ಬೆನ್ನು ಮೂಳೆಗೆ ಕಬ್ಬಿಣದ ಸರಳನ್ನು ಚುಚ್ಚಿಕೊಂಡು ವಾಹನವನ್ನು ಎಳೆಯುತ್ತಿರುವ ಭಕ್ತ , ಚೂಪಾದ ಕತ್ತಿಯನ್ನು ಬೆನ್ನಿಗೆ ಕಟ್ಟಿಕೊಂಡು ವಾಹನದ ಮೇಲೆ ನೇತಾಡುತ್ತಿರುವ ಯುವಕ ಈ ದೃಶ್ಯಗಳು ಕಂಡುಬರುವುದು ತಮಿಳುನಾಡಿನ ಹೊಸೂರಿನಲ್ಲಿ. ಹೊಸೂರಿನ ಕೊಟೆ ಮಾರಿಯಮ್ಮ ಜಾತ್ರಾ ಮಹೊತ್ಸವ ವಿಜೃಂಭಣೆಯಿಂದ ನೆರವೇರಿತು . ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಿಂದ ಈ ಜಾತ್ರೆಗೆ ಭಕ್ತಾಧಿಗಳು ಆಗಮಿಸಿ ತಮ್ಮ ಹರಕೆಯನ್ನು ಈಡೇರಿಸಿದರು , ಈ ದೇವಿಗೆ ವಿಚಿತ್ರ ರೀತಿಯಲ್ಲಿ ಹರಕೆ ಕಟ್ಟಿಕೊಳ್ಳುವ ಭಕ್ತರು ತಮ್ಮ ಹರಕೆ ಈಡೇರಿದರೆ ಮಾರಿಯಮ್ಮನಿಗೆ ತಮ್ಮ ಬೆನ್ನುಗಳಿಗೆ ಚೂಪಾದ ಕತ್ತಿಯಿಂದ ಇಲ್ಲವೇ ಕಬ್ಬಿಣದ ಸರಳಿನಿಂದ ಚುಚ್ಚಿಕೊಂಡು ತಮ್ಮ ಹರಕೆಗಳನ್ನು ಈಡೇರಿಸುತ್ತಾರೆ . ಇನ್ನೂ ಕೆಲವರು ತಮ್ಮ ಬೆನ್ನು ಮೂಳೆಗೆ ಕಬ್ಬಿಣದ ಸರಳುಗಳಿಂದ ಬಿಗಿಯಾಗಿ ಚುಚ್ಚಿಕೊಂಡು ವಾಹನಗಳನ್ನು ಈ ದೇವಾಲಯದ ಸುತ್ತ ಪ್ರದಕ್ಷಿಣೆ ಹಾಕಿಸಿ ತಮ್ಮ ಹರಕೆಯನ್ನ ಭಕ್ತಿಯಿಂದ ದೇವಿಗೆ ಸಮರ್ಪಿಸುತ್ತಾರೆ .
ಈ ದೇವರ ಶಕ್ತಿ ಅಪಾರವಾಗಿದ್ದು ರಾಜ್ಯದ ಮೂಲೆ ಮೂಲೆಗಳಿಂದ ಇಲ್ಲಿನ ಬರುವ ಭಕ್ತರು ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಹರಕೆಗಳನ್ನ ಕಟ್ಟಿಕೊಳ್ಳುತ್ತಾರೆ . ಇದ್ದಲ್ಲದೇ ಇಲ್ಲಿನ ಕೆಲವು ಮಹಿಳೆಯರ ಮೇಲೆ ದೇವಿ ಆವಾಹನೆಯಾಗಿ ಭಕ್ತರ ಸಮಸ್ಯೆಗಳನ್ನು ಪರಿಹರಿಸುತ್ತಾಳೆ ಎಂಬ ನಂಬಿಕೆ ಜನರಲ್ಲಿ ಬಲವಾಗಿದೆ.
ಆ್ಯಪ್ನಲ್ಲಿ ವೀಕ್ಷಿಸಿ x