Bengaluru Mangaluru Rail: ಬೆಂಗಳೂರು, ಮಂಗಳೂರು ರೈಲ್ವೇ ಪ್ರಯಾಣಿಕರ ಗಮನಕ್ಕೆ: ರೈಲುಗಳು ಕ್ಯಾನ್ಸಲ್

Krishnaveni K

ಶನಿವಾರ, 17 ಮೇ 2025 (10:40 IST)
ಬೆಂಗಳೂರು: ಬೆಂಗಳೂರು ಮತ್ತು ಮಂಗಳೂರು ನಡುವೆ ರೈಲು ಪ್ರಯಾಣ ಮಾಡುವವರು ಇದನ್ನು ತಪ್ಪದೇ ಗಮನಿಸಬೇಕು. ಬೆಂಗಳೂರು-ಮಂಗಳೂರು ರೈಲುಗಳು ಕೆಲವೊಂದು ಕ್ಯಾನ್ಸಲ್ ಆಗಿವೆ.

ಸಕಲೇಶಪುರ ಮತ್ತು ಸುಬ್ರಹ್ಮಣ್ಯ ಮಾರ್ಗದಲ್ಲಿ ಜೂನ್ 1 ರಿಂದ ನವಂಬರ್ 1 ರವರೆಗೆ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ. ಇದಕ್ಕೆ ಕಾರಣ ಈ ಮಾರ್ಗದಲ್ಲಿ ರಲ್ವೇ ವಿದ್ಯುದ್ದೀಕರಣ ಮತ್ತು ಸುರಕ್ಷತಾ ಕಾಮಗಾರಿ ನಡೆಯುತ್ತಿದೆ. ಈ ಕಾರಣಕ್ಕೆ ತಾತ್ಕಾಲಿಕವಾಗಿ ಹಲವು ರೈಲುಗಳನ್ನು ರದ್ದು ಮಾಡಲಾಗಿದೆ ಎಂದು ನೈಋತ್ಯ ರೈಲ್ವೇ ಪ್ರಕಟಣೆ ನೀಡಿದೆ.

ಯಾವೆಲ್ಲಾ ರೈಲುಗಳು ರದ್ದು?
-ಮೇ 31 ರಿಂದ ನವಂಬರ್ 1 ರವರೆಗೆ ಪ್ರತಿ ಶನಿವಾರದಂದು ಸಂಚರಿಸುವ ಯಶವಂತಪುರ-ಮಂಗಳೂರು ಜಂಕ್ಷನ್ ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲು.
-ಜೂನ್ 1 ರಿಂದ ನವಂಬರ್ 2 ರವರೆಗೆ ಪ್ರತಿ ಭಾನುವಾರ ಸಂಚರಿಸುವ ಮಂಗಳೂರು ಜಂಕ್ಷನ್ ನಿಂದ ಯಶವಂತಪುರಕ್ಕೆ ತೆರಳುವ ಸಾಪ್ತಾಹಿಕ ರೈಲು ರದ್ದು.
-ಜೂನ್ 1 ರಿಂದ ಅಕ್ಟೋಬರ್ 30 ರವರೆಗೆ ಮಂಗಳವಾರ, ಗುರುವಾರ ಮತ್ತು ಭಾನುವಾರ ಸಂಚರಿಸುವ ಯಶವಂತಪುರದಿಂದ ಮಂಗಳೂರು ಜಂಕ್ಷನ್ ಟ್ರೈ ವೀಕ್ಲೀ ಎಕ್ಸ್ ಪ್ರೆಸ್ ರೈಲು ರದ್ದಾಗಲಿದೆ.
-ಜೂನ್ 2 ರಿಂದ ಅಕ್ಟೋಬರ್ 31 ರವರೆಗೆ ಸೋಮವಾರ, ಬುಧವಾರ ಮತ್ತು ಶುಕ್ರವಾರ ಸಂಚರಿಸುವ ಮಂಗಳೂರಿನಿಂದ ಯಶವಂತಪುರ ಟ್ರೈ ವೀಕ್ಲೀ ಎಕ್ಸ್ ಪ್ರೆಸ್ ರೈಲು ರದ್ದು.
-ಜೂನ್ 2 ರಿಂದ ಅಕ್ಟೋಬರ್ 31 ರವರೆಗೆ ಸೋಮವಾರ, ಬುಧವಾರ ಮತ್ತು ಶುಕ್ರವಾರ ಸಂಚರಿಸುವ ಯಶವಂತಪುರದಿಂದ ಕಾರವಾರದವರೆಗಿನ ಟ್ರೈ ವೀಕ್ಲೀ ಎಕ್ಸ್ ಪ್ರೆಸ್ ರೈಲು ರದ್ದು. ಜೂನ್ 3 ರಿಂದ ನವಂಬರ್ 1 ರವರೆಗೆ ಮಂಗಳವಾರ, ಗುರುವಾರ ಮತ್ತು ಶನಿವಾರ ಸಂಚರಿಸುವ ಕಾರವಾರದಿಂದ ಯಶವಂತಪುರಕ್ಕೆ ಸಂಚರಿಸುವ ಟ್ರೈ ವೀಕ್ಲೀ ರೈಲು ರದ್ದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ