ಇನ್ಮುಂದೆ ಕನ್ನಡದಲ್ಲೂ ಬರೆಯಬಹುದು ರೈಲ್ವೆ ಇಲಾಖೆಯ ಪರೀಕ್ಷೆ

Sampriya

ಶುಕ್ರವಾರ, 4 ಅಕ್ಟೋಬರ್ 2024 (18:24 IST)
Photo Courtesy X
ನವದೆಹಲಿ: ರೈಲ್ವೆ ನೇಮಕ ಪರೀಕ್ಷೆ ಮಾತ್ರವಲ್ಲ, ಮುಂಬಡ್ತಿ ಪರೀಕ್ಷೆಗಳನ್ನೂ ಕನ್ನಡದಲ್ಲಿ ನಡೆಸಲಾಗುವುದು ಎಂದು ಕೇಂದ್ರ ರೈಲ್ವೆ ಹಾಗು ಜಲ ಶಕ್ತಿ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಘೋಷಿಸುವ ಮೂಲಕ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.

ಪ್ರಸ್ತುತ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಈ ಪರೀಕ್ಷೆಗಳು ನಡೆಯುತ್ತಿದ್ದು, ಇದೀಗ ಕನ್ನಡದಲ್ಲಿಯೂ ಪರೀಕ್ಷೆ ನಡೆಸಲಾಗುವುದರಿಂದ ಕರ್ನಾಟಕದ ಸಿಬ್ಬಂದಿಗಳಿಗೆ ಅನುಕೂಲವಾಗುವುದು ಎಂದು ಸಚಿವರ ಕಚೇರಿಯು ಪ್ರಕಟಣೆಯಲ್ಲಿ ಹೇಳಿದೆ.

ಮುಂದಿನ ದಿನಗಳಲ್ಲಿ ರೈಲ್ವೆ ಇಲಾಖೆ ಸೇರಲು ನಡೆಸುವ ಪರೀಕ್ಷೆಯಲ್ಲಿ ಕನ್ನಡದಲ್ಲಿ ಬರೆಯುವ ಅವಕಾಶವಿದೆ. ಈಗಾಗಲೇ ರೈಲ್ವೆ ಇಲಾಖೆ ಸೇರಲು ನಡೆಸುವ ಪರೀಕ್ಷೆ ಕನ್ನಡದಲ್ಲಿ ಸಹ ಬರೆಯಲು ಅವಕಾಶವಿದೆ.

ಸಚಿವ ವಿ ಸೋಮಣ್ಣ ಅವರ ಈ ಆದೇಶದಿಂದ ಇಲಾಖೆಗೆ ಸೇರಿದ ನಂತರ ಮುಂಬಡ್ತಿಗೆ ಸಹ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಿದ್ದು, ಅನೇಕ ಕನ್ನಡಿಗ ಸಿಬ್ಬಂದಿಗಳಿಗೆ ಇದು ವರವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ