ನಗರದಲ್ಲಿರುವ ಕೆಲ ಆಯುರ್ವೇದಿಕ ಮಸಾಜ್ ಕೇಂದ್ರಗಳು ಸ್ವೀಡೀಶ್, ಅರೋಮಾ ಮತ್ತು ಥಾಯಿ ಮಸಾಜ್ ನೆಪದಲ್ಲಿ ಸೆಕ್ಸ್ ಸೇವೆಗಳನ್ನು ನೀಡುತ್ತಿವೆ. ಮಸಾಜ್ ಪಾರ್ಲರ್‌ನಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ಉದ್ಯೋಗಿಯ ಪ್ರಕಾರ, ನೋಟು ನಿಷೇಧದ ನಂತರ ಗ್ರಾಹಕರಲ್ಲಿ ಇಳಿಕೆಯಾಗಿದೆ. ಕೆಲವು ಬಾರಿ ಗ್ರಾಹಕರು ಹಳೆಯ ನೋಟುಗಳನ್ನು ನೀಡುತ್ತಾರೆ. ಹಳೆಯ ನೋಟುಗಳನ್ನು ಬ್ಯಾಂಕ್‌ನಲ್ಲಿ ಡಿಪಾಸಿಟ್ ಮಾಡುವುದು ಇಕ್ಕಟ್ಟಿನ ಕೆಲಸವಾಗಿದ್ದರಿಂದ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳನ್ನು ಸ್ವೀಕರಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ನಗರ ಪೊಲೀಸ್ ಆಯುಕ್ತ ಎನ್.ಎಸ್.ಮೇಘರಿಕ್ ಮಾತನಾಡಿ, ಇಂತಹ ಅನಧಿಕೃತ ಮಸಾಜ್ ಪಾರ್ಲರ್‌ಗಳ ಮೇಲೆ ಸ್ಥಳೀಯ ಪೊಲೀಸರು ಮತ್ತು ಅಪರಾಧ ವಿಭಾಗದ ಪೊಲೀಸರು ಹದ್ದಿನ ಕಣ್ಣಿಟ್ಟಿರುತ್ತಾರೆ. ಪೊಲೀಸರು ಇಂತಹ ಮಸಾಜ್ ಕೇಂದ್ರಗಳ ಮೇಲೆ ದಾಳಿ ಮಾಡಿ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಾರೆ ಎಂದು ತಿಳಿಸಿದ್ದಾರೆ.
ಏತನ್ಮಧ್ಯೆ, ಐಟಿ, ಬಿಟಿ ಮತ್ತು ಎಸ್‌ಆಂಡ್‌ಟಿ ಇಲಾಖೆಗಳನ್ನು ಸಂಪರ್ಕಿಸಿ ಇತ್ತೀಚೆಗೆ ಪಿಓಎಸ್ ಮಷಿನ್ ಖರೀದಿಸಿದವರ ವಿವರಗಳನ್ನು ನೀಡುವಂತೆ ಕೋರಲಾಗಿದೆ ಎಂದು ಉನ್ನತ ಪೊಲೀಸ್ ಅಧಿಕಾರಿಗಳ ಮೂಲಗಳು ತಿಳಿಸಿವೆ.