Bengaluru Water Crisis: ನೀರಿನ ಅಭಾವದಿಂದ ಮತ್ತೆ ಶುರುವಾಯ್ತು ಆನ್ ಲೈನ್ ಕ್ಲಾಸ್

Krishnaveni K

ಶುಕ್ರವಾರ, 8 ಮಾರ್ಚ್ 2024 (10:25 IST)
ಬೆಂಗಳೂರು: ಬೆಂಗಳೂರಿನಲ್ಲಿ ನೀರಿನ ಅಭಾವ ತಾರಕಕ್ಕೇರಿದ್ದು ಇದರಿಂದಾಗಿ ಕೆಲವು ಶಿಕ್ಷಣ ಸಂಸ್ಥೆಗಳು ಹಿಂದಿನಂತೆ ಆನ್ ಲೈನ್ ಕ್ಲಾಸ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ.

ಶಾಲೆಗಳು ಈಗಾಗಲೇ ಕೊನೆಯ ಹಂತ ತಲುಪಿದೆ. ಆದರೆ ಕೆಲವು ಟ್ಯುಟೋರಿಯಲ್ಸ್, ಕೋಚಿಂಗ್ ಸೆಂಟರ್ ಗಳು, ಕಾಲೇಜುಗಳು ಜಾರಿಯಲ್ಲಿದೆ. ಆದರೆ ಕಾಲೇಜಿನಲ್ಲಿ ಏಕಾಏಕಿ ನೂರಾರು ವಿದ್ಯಾರ್ಥಿಗಳು ಹಾಜರಾದರೆ ನೀರಿನ ಸಮಸ್ಯೆ ಎದುರಾಗುತ್ತಿದೆ. ಹೀಗಾಗಿ ಕೆಲವು ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಆನ್ ಲೈನ್ ಕ್ಲಾಸ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಬಂದಿವೆ.

ಈ ಮೊದಲು ಕೊರೋನಾ ಸಂದರ್ಭದಲ್ಲಿ ಎಲ್ಲಾ ಶಾಲಾ, ಕಾಲೇಜುಗಳು ಆನ್ ಲೈನ್ ಶಿಕ್ಷಣಕ್ಕೆ ಮೊರೆ ಹೋಗಿದ್ದವು. ವಿದ್ಯಾರ್ಥಿಗಳು ಆನ್ ಲೈನ್ ಮೂಲಕ ಮನೆಯಿಂದಲೇ ಪಾಠ ಕೇಳುತ್ತಿದ್ದರು. ಹೊರಗಡೆ ಬಂದರೆ ರೋಗದ ಭಯವಿತ್ತು. ಆದರೆ ಇಂದು ನೀರಿನ ಅಭಾವ ಅನಿವಾರ್ಯವಾಗಿ ಆನ್ ಲೈನ್ ಗೆ ಮೊರೆ ಹೋಗುವಂತೆ ಮಾಡಿದೆ.

ಬೆಂಗಳೂರಿನ ಹಲವೆಡೆ ನೀರಿನ ತೀವ್ರ ಅಭಾವ ಎದುರಾಗಿದೆ. ಬಡವರು ಟ್ಯಾಂಕರ್ ಖರೀದಿಸಿ ನೀರು ತರಿಸಿಕೊಳ‍್ಳಲೂ ಆಗದಷ್ಟು ಬೆಲೆ ಗಗನಕ್ಕೇರಿದೆ. ಹೀಗಿರುವಾಗ ಕೆಲವೆಡೆ ಶಿಕ್ಷಣ ಸಂಸ್ಥೆಗಳು ಅನಿವಾರ್ಯವಾಗಿ ಅವಧಿಗೂ ಮುನ್ನವೇ ಬಾಗಿಲು ಮುಚ್ಚುವ ಪರಿಸ್ಥಿತಿ ಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ