ಸಿಲಿಕಾನ್ ಸಿಟಿ ಜನರೇ ಎಚ್ಚರ ಎಚ್ಚರ..!!

ಸೋಮವಾರ, 6 ನವೆಂಬರ್ 2023 (14:45 IST)
ನಿತ್ಯವೂ  ನೆಲದೊಳಗಿದ್ದ ವಿಷಕಾರಿ ಸರ್ಪಗಳು ಪ್ರತ್ಯೇಕ್ಷವಾಗ್ತಿದೆ.ಒಂದು ಕಡೆ ಮಳೆ, ಮತ್ತೊಂದು ಕಡೆ ಬಿಸಿಲಿನ ತಾಪ ಹೆಚ್ಚಾಗ್ತಿರೋ ಕಾರಣ ತಂಪು ವಾತವರಣ ಹುಡುಕಿಕೊಂಡು ಮನೆಗಳಿಗೆ ಹಾವುಗಳ ಪ್ರವೇಶ ಮಾಡ್ತಿದೆ.ಪಾಲಿಕೆ‌ ಅರಣ್ಯ ಇಲಾಖೆಗೆ ಸರ್ಪಗಳ ಕಾಟದ ಕಂಪ್ಲೇಂಟ್‌ ದಾಖಲಾಗ್ತಿವೆ.ಪ್ರತಿ ನಿತ್ಯ ಬಿಬಿಎಂಪಿ ಕಂಟ್ರೋಲ್ ರೂಂ ಗೆ ಐವತ್ತಕ್ಕೂ ಹೆಚ್ಚು ಕರೆಗಳು ಬರುತ್ತಿದೆ.ಮನೆಯೊಳಗೆ, ಕಾಂಪೌಂಡ್ ಒಳಗೆ, ಕಚೇರಿಯೊಳಗೆ ಸೇರಿ ಮೆಡಿಕಲ್ ಶಾಪ್ ಗಳಲ್ಲಿ ಸರ್ಪಗಳ ಕಾಟ ಎಂದು ದೂರು ದಾಖಲಾಗಿದೆ.
 
ಮಳೆ ಹೆಚ್ಚಾಗ್ತಿದ್ದಂಗೆ ಮನೆಗಳಿಗೆ ವಿಷಕಾರಿ ಸರ್ಪಗಳು ನುಗ್ಗುತ್ತಿವೆ.ಮನೆಯ ಕಾಂಪೌಂಡ್, ಅಡುಗೆ ಮನೆ, ಶೂ ಗಳ ಒಳಗೆ ಪ್ರವೇಶ ಮಾಡ್ತಿದೆ.ಬಿಬಿಎಂಪಿ ಅರಣ್ಯ ಇಲಾಖೆ ಸಿಬ್ಬಂದಿಗಳಿಂದ ಸರ್ಪಗಳ ಸೆರೆ ಹಿಡಿಯಲಾಗಿದೆ.
 
ಇನ್ನೂ  ಶಿವಾಜಿನಗರದ ಮೆಡಿಕಲ್ ಶಾಪ್ ಗೆ ಆಫಿಸ್ ಗೆ  ಮರಿ ನಾಗರ ಹಾವು ನುಗ್ಗಿದೆ. ಹಾವು ಕಾಣಿಸಿಕೊಂಡ ಹಿನ್ನೆಲೆ ಮೆಡಿಕಲ್ ಶಾಪ್ ಸಿಬ್ಬಂದಿಗೆ ಆತಂಕ ಉಂಟಾಗಿದೆ.ಹಾವು ಕಾಣಿಸುತ್ತಿದ್ದಂತೆ ಬಿಬಿಎಂಪಿ ಅರಣ್ಯ ಸಿಬ್ಬಂದಿಗೆ ಕರೆ  ಮಾಡುತ್ತಿದ್ದಂತೆ ಉರುಗ ತಜ್ಞರಿಂದ ಹಾವು ಸೆರೆಹಿಡಿಯಲಾಗಿದೆ.
 
ಲಿಂಗರಾಜಪುರದ ನಿವಾಸಿಯೊಬ್ಬರ ಮನೆಗೆ ನುಗ್ಗಿದ ಕೇರೆ ಹಾವು ನುಗ್ಗಿದ್ದು,ಅಡುಗೆ ಮನೆಯೊಳಗೆ ಅಡಗಿ ಕುಳಿತಿತ್ತು.ಸದ್ಯ ಬುಸ್ ಬುಸ್ ಸೌಂಡ್ ಕೇಳಿ ಉರುಗ ತಜ್ಞರಿಗೆ ಕರೆವಮಾಡಿದ್ದಾರೆ.ಉರುಗ ತಜ್ಞರಿಂದ ಹಾವಿನ ರಕ್ಷಣೆ ಮಾಡಿ ಕಾಡಿಗೆ  ಸ್ನೇಕ್ ಮೋಹನ್ ಬಿಟ್ಟಿದ್ದಾರೆ.
 
ಕಾಕ್ಸ್ ಟೌನ್ ನ ನಿವಾಸಿಯೊಬ್ಬರ ಕಾಂಪೌಂಡ್ ನಲ್ಲಿ  ಬೃಹತ್ ಗಾತ್ರದ ನಾಗರಹಾವು ಕಾಣಿಸಿಕೊಂಡಿದೆ.ಹಾವು ಕಾಣಸಿಕೊಳ್ಳುತ್ತಿದ್ದಂತೆ ಮನೆಯವರು ಗಾಬರಿಗೊಂಡು ಉರುಗ ತಜ್ಞರಿಗೆ ಕರೆ ಮಾಡಿ ಹಾವಿನ ರಕ್ಷಣೆ ಮಾಡಿದ್ದಾರೆ.ಹೀಗೆ ಕಾಕ್ಸ್ ಟೌನ್, ಬಾಣಸವಾಡಿ, ಹೆಬ್ಬಾಳ, ಎಂಜಿ ರಸ್ತೆ, ಯಲಹಂಕ, ಎಲೆಕ್ಟ್ರಾನಿಕ್ ಸಿಟಿ, ಹಲಸೂರು, ಶಾಂತಿನಗರ,ಸೇರಿದಂತೆ ಸಿಟಿಯ ಬಹುತೇಕ ಎಲ್ಲಕಡೆ ಹಾವುಗಳು ಕಂಡುಬರುತ್ತಿವೆ ಎಂದ ಉರಗ ತಜ್ಞ ಮೋಹನ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ