ಹಾಸನ: ಕೋರ್ಟ್ ಅನುಮತಿ ಪಡೆದು ಹಾಸನಕ್ಕೆ ಇಂದು ಮೊದಲ ಭಾರಿಗೆ ಭೇಟಿ ನೀಡಿರುವ ಭವಾನಿ ರೇವಣ್ಣ ನಾನು ಯಾಕೆ ಹಾಸನಕ್ಕೆ ಬಿಟ್ಟು ಹೋಗ್ಲಿ, ಇಲ್ಲಿನ ಜನ ನಮ್ಮ ಕುಟುಂಬಕ್ಕೆ ಇದುವರೆಗೂ ಸಹಕರಿಸಿದ್ದಾರೆ ಎಂದು ಭವಾನಿ ರೇವಣ್ಣ ಹೇಳಿದ್ದಾರೆ.
ಹಾಸನಕ್ಕೆ ಈವತ್ತು ನಾನು ಬರ್ತೀನಿ ಎಂದು ಯಾರಿಗೂ ಹೇಳಿರಲಿಲ್ಲ. ಹಾಗಿದ್ದರೋ ಎಷ್ಟೋ ಜನ ಹೇಗೋ ತಿಳ್ಕೊಂಡು ನನ್ನ ನೋಡಕ್ಕೆ ಬಂದ್ರು. ಹಾಸನ ಜನ ಮೊದಲಿನಿಂದಲೂ ಒಳ್ಳೆಯದೇ ಮಾಡಿದ್ದಾರೆ. ನಾನೂ ನನ್ನಿಂದಾಗುವಷ್ಟು ಒಳ್ಳೆಯದೇ ಮಾಡ್ತೀನಿ ಎಂದಿದ್ದಾರೆ.
ಹಾಸನ ಜನತೆಗೆ ನಾವು ಯಾವತ್ತೂ ಚಿರಋಣಿಯಾಗಿರ್ತೀನಿ. ನಾನು ಯಾವತ್ತೂ ಹಾಸನ ಜನರಿಂದ ದೂರ ಉಳಿಯಲ್ಲ. ಎಲ್ಲರಿಗೂ ಗೊತ್ತು, ನನಗೆ, ನಮ್ಮ ಕುಟುಂಬಕ್ಕೆ ನಮ್ಮ ಮಾವನವರು ದೇವೇಗೌಡರ ಕಾಲದಿಂದ, ನನ್ನ ಮನೆಯವರು ರೇವಣ್ಣ, ಮಕ್ಕಳ ಜೊತೆಗೂ ಹಾಸನ ಜೊತೆ ಸಹಕರಿಸುತ್ತಲೇ ಬಂದಿದ್ದಾರೆ. ಹೀಗಾಗಿ ನಾವೂ ಅವರ ಕೈ ಬಿಡಲ್ಲ ಎಂದಿದ್ದಾರೆ.
ಇನ್ನು, ಇಂದು ಯಾವುದೇ ರಾಜಕೀಯ ಮಾತನಾಡಲ್ಲ ಎಂದೂ ಹೇಳಿದ್ದಾರೆ. ಇಷ್ಟು ದಿನ ಹಾಸನಕ್ಕೆ ಬರದೇ ಇದ್ದರೂ ಇಲ್ಲಿಂದ ಫೋನ್ ಕರೆಗಳು ಬರ್ತಿದ್ದವು. ಕಾರ್ಯಕ್ರಮಗಳಿಗೆ ಆಹ್ವಾನ ಬರುತ್ತಿತ್ತು. ಈಗ ಮತ್ತೆ ಬರಲು ಸಾಧ್ಯವಾಗಿರುವುದು ಸಂತೋಷವಾಗಿದೆ ಎಂದಿದ್ದಾರೆ.