ಆವೆಲ್ಲ ವಿಚಾರ ಕೇಳ್ಬೇಡಿ: ಕಿಡ್ನ್ಯಾಪ್ ಪ್ರಕರಣದ ಬಗ್ಗೆ ಕೇಳಿದ್ದೆ ತಡ ಭವಾನಿ ರೇವಣ್ಣ ಮುಖದ ನಗುವೇ ಮಾಯ

Sampriya

ಸೋಮವಾರ, 7 ಏಪ್ರಿಲ್ 2025 (17:05 IST)
Photo Courtesy X
ಹಾಸನ:  ಮಹಿಳೆಯ ಕಿಡ್ನ್ಯಾಪ್ ಪ್ರಕರಣದ ಆರೋಪಿಯಾಗಿರುವ ಭವಾನಿ ರೇವಣ್ಣ ಅವರು 10 ತಿಂಗಳ ಬಳಿಕ ಹಾಸನಕ್ಕೆ ವಾಪಾಸ್ಸಾಗಿದ್ದಾರೆ. ಹಾಸನ ರಾಜಕಾರಣದಲ್ಲಿ ಸಕ್ರೀಯವಾಗಿ ಗುರುತಿಸಿಕೊಂಡಿದ್ದ ಭವಾನಿ ರೇವಣ್ಣಗೆ ಹೂ ಮಳೆ ಸುರಿಸಿ, ಕಾರ್ಯಕರ್ತರು ಸ್ವಾಗತ ಕೋರಿದ್ದಾರೆ.

ಈ ವೇಳೆ ಮಾಧ್ಯಮದವರು ಮಹಿಳೆಯ ಕಿಡ್ನ್ಯಾಪ್ ಪ್ರಕರಣದ ಬಗ್ಗೆ ಪ್ರಶ್ನೆ ಮಾಡಲು ಮುಂದಾಗುತ್ತಿದ್ದ ಹಾಗೇ ಪ್ರತಿಕ್ರಿಯಿಸಿದ ಭವಾನಿ ಅವರು, ಅದೆಲ್ಲ ವಿಚಾರ ಬೇಡ. ಆವೆಲ್ಲ ನೀವು ಪ್ರಶ್ನೆಗಳನ್ನು ಕೇಳ್ಬಾರ್ದು, ನಾವು ಹೇಳಲು ಬಾರ್ದು. ಅದೆಲ್ಲ ಬೇಡದ ವಿಷಯ ಎಂದು ಮಾತು ಬದಲಾಯಿಸಿದರು.

ಹಾಸನ ಜನರ ಪ್ರೀತಿ ನೋಡಿ ತುಂಬಾ ಖುಷಿಯಾಯಿತು. ಕಳೆದ 20ವರ್ಷದಿಂದ ಜನರ ಜತೆ ಬೆರೆತು, ಕೆಲಸ ಮಾಡಿದ್ದೆ. ನಾನು ಹಾಸನಕ್ಕೆ ಬರುವ ವಿಚಾರವನ್ನು ತಿಳಿಸಿಲ್ಲ. ಆದರೆ ನಿರೀಕ್ಷೆಗಿಂತ ಹೆಚ್ಚಿನ ಜನರು ಬಂದು ನನ್ನನ್ನು ಸ್ವಾಗತಿಸಿದ್ದು ತುಂಬಾನೇ ಖುಷಿಯಾಯಿತು.

ಹಿಂದಿನಿಂದಲೂ ಅವರ ಜತೆ ಕೆಲಸ ಮಾಡುತ್ತಿದ್ದೆ. ಇನ್ನೂ ಮುಂದಿನ ದಿನಗಳಲ್ಲೂ ಜನರ ಜತೆ ಸಮಸ್ಯೆಗಳನ್ನು ಆಲಿಸಿ, ಅವರ ಕಷ್ಟಕ್ಕೆ ತನ್ನಿಂದ್ದ ಆಗುವ ಕೆಲಸವನ್ನು ಮಾಡುತ್ತೇನೆ ಎಂದು ಭರವಸೆ ನೀಡಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ