ಕೋಳಿಗೆ ಅರ್ಧ ಟಿಕೆಟ್ ತೆಗೆದುಕೊಂಡ ಭೂಪ

ಮಂಗಳವಾರ, 30 ನವೆಂಬರ್ 2021 (19:30 IST)
ಕೊಪ್ಪಳ: ವ್ಯಕ್ತಿಯೋರ್ವ ಸಾರಿಗೆ ಬಸ್​ನಲ್ಲಿ ಕೋಳಿಗೂ ಕೂಡ ಅರ್ಧ ಟಿಕೆಟ್​ ತೆಗೆದುಕೊಂಡು ಪ್ರಯಾಣಿಸಿದ ಅಪರೂಪದ ಘಟನೆ ನಗರದಲ್ಲಿ ನಡೆದಿದೆ.
 
ಕೆಎಸ್‌ಆರ್​ಟಿಸಿ ಬಸ್​ನಲ್ಲಿ ವ್ಯಕ್ತಿಯೋರ್ವ ಹೈದ್ರಾಬಾದ್ ನಿಂದ ಗಂಗಾವತಿಗೆ ಬಂದಿದ್ದು, ಸಾಕಿದ ಕೋಳಿಗೂ 463 ರೂಪಾಯಿ ಟಿಕೆಟ್ ಪಡೆದು ಕೋಳಿಯನ್ನು ಬಸ್​ನಲ್ಲಿ ತಗೆದಕೊಂಡು ಬಂದಿದ್ದಾರೆ.
 
ಸರ್ಕಾರಿ ಬಸ್ ಗಳಲ್ಲಿ ಸಾಕು ಪ್ರಾಣಿಗಳನ್ನು ಸಾಗಾಟ ಮಾಡಬೇಕಾದರೆ ಟಿಕೆಟ್ ಪಡೆಯುವ ನಿಯಮವಿದೆ. ಹೀಗಾಗಿ ನವೆಂಬರ್ 28 ರಂದು ಹೈದ್ರಾಬಾದ್ ನಿಂದ ಪ್ರಯಾಣ ಮಾಡಿದ ವ್ಯಕ್ತಿ ತಂದಿದ್ದ ಕೋಳಿಗೂ ನಿರ್ವಹಕರು ಅರ್ಧ ಟಿಕೆಟ್ ನೀಡಿದ್ದಾರೆ.
 
ಇನ್ನು ಒಂದು ಕೋಳಿಗೆ ಅರ್ಧ ಟಿಕೆಟ್ ನಿಡಿರೋ ವಿಚಾರವಾಗಿ ಇದೀಗ ಪರ ವಿರೋಧ ಚರ್ಚೆಗಳು ಆರಂಭವಾಗಿವೆ. ಯಾಕಂದ್ರೆ ಒಂದು ಕೋಳಿ ಬೆಲೆ ಸುಮಾರು 400 ರಿಂದ 500 ಅಂತದ್ರಲ್ಲಿ 463 ರೂಪಾಯಿ ಟಿಕೆಟ್ ನೀಡಿದ್ದು ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಬಸ್ ನಿರ್ವಾಹಕ ಅನೀಶ್ ನಾವು ಹೈದ್ರಾಬಾದ್ ನಿಂದ ಬರ್ತಾ ಇದ್ವಿ, ಓರ್ವ ಕೋಳಿ ಜೊತೆ ಬಂದು ನಾನು ಬರ್ತೀನಿ ಎಂದ. ಕೋಳಿಗೂ ಚಾರ್ಜ್ ಆಗತ್ತೆ ಅಂದ್ವಿ, ಆಗ ಇದು ಸಾಕಿದ ಕೋಳಿ ನಾನು ಅದನ್ನ ಬಿಟ್ಟು ಬರಲ್ಲ ಎಂದು ಅರ್ಧ ಟಿಕೆಟ್ ಹಣ ಪಾವತಿಸಿ ಕೋಳಿ ಜೊತೆಗೆ ಕರೆದುಕೊಂಡು ಬಂದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ