KSRTC ನೌಕರರಿಗೆ ಭರ್ಜರಿ ಗುಡ್ ನ್ಯೂಸ್

ಶುಕ್ರವಾರ, 17 ನವೆಂಬರ್ 2023 (14:45 IST)
ಸಾರಿಗೆ ನೌಕರರ 'ತುಟ್ಟಿಭತ್ಯೆ' ಶೇ.35ರಿಂದ 38.75ಕ್ಕೆ ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶ ಮಾಡಿದೆ.ಕೆಎಸ್ ಆರ್ ಟಿಸಿ ಸೇರಿ ನಾಲ್ಕು ನಿಗಮದ ನೌಕರರಿಗೆ ರಾಜ್ಯ ಸರ್ಕಾರವು ಭರ್ಜರಿ ಸಿಹಿಸುದ್ದಿ ನೀಡಿದೆ.ತುಟ್ಟಿಭತ್ಯೆ ಹೆಚ್ಚಳ ಮಾಡಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಆದೇಶ ಹೊರಡಿಸಿದೆ.
 
 ದಿನಾಂಕ 21.10.2023 ರಲ್ಲಿ ಸರ್ಕಾರಿ ನೌಕರರಿಗೆ ದಿನಾಂಕ 01.07.2023 ರಿಂದ ಅನ್ವಯವಾಗುವಂತೆ ತುಟ್ಟಿಭತ್ಯೆ ದರವನ್ನು ಶೇ.35 ರಿಂದ ಶೇ.38.75 ಕ್ಕೆ ಹೆಚ್ಚಿಸಿ ಆದೇಶಿಸಿದೆ.ನಾಲ್ಕೂ ಸಾರಿಗೆ ನಿಗಮಗಳಲ್ಲಿ ನವಂಬರ್-2023 ರ ತಿಂಗಳಿಗೆ ವೇತನದಲ್ಲಿ ಮತ್ತು ಮುಂದಕ್ಕೆ ತುಟ್ಟಿಭತ್ಯೆ ದರವನ್ನು ಅನುಷ್ಠಾನಗೊಳಿಸುವುದು.86.35 ರಿಂದ .38.75 ಕೈ ಹೆಚ್ಚಿಸಿ ಕರಾರಸಾನಿ ಗಮದಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಜುಲೈ-2023 ರಿಂದ ಅಕ್ಟೋಬರ್-2023 ರವರೆಗಿನ ತುಟ್ಟಿಭತ್ಯೆ ಹಿಂಬಾಕಿ ಪಾವತಿಯ ಕುರಿತು ಪ್ರತ್ಯೇಕವಾಗಿ ಆದೇಶಿಸಿದೆ
 
ನಾಲ್ಕು ನಿಗಮಗಳಾದ ಬೆಂಮನಸಾ/ವಾಕರಸಾ/ಕಕರಸಾ ಸಂಸ್ಥೆಗಳು ಹಿಂಬಾಕಿ ಪಾವತಿಯ ಕುರಿತು ಆಯಾ ಸಂಸ್ಥೆಗಳು ಆರ್ಥಿಕ ಪರಿಸ್ಥಿತಿಗನುಗುಣವಾಗಿ ನಿರ್ಧರಿಸುವುದು.ಈ ಮೂಲಕ ಸಾರಿಗೆ ನೌಕರರಿಗೆ ದೀಪಾವಳಿಗೆ ಅಧಿಕೃತ ಆದೇಶ ಹೊರಡಿಸುವ ಮೂಲಕ ಉಡುಗೊರೆ ಕೊಟ್ಟಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ