ಮಹಿಳೆಯರಿಗೆ ಶಕ್ತಿ ತುಂಬುತ್ತಿರುವ ಶಕ್ತಿ ಯೋಜನೆಗೆ ಬಿಗ್ ರೆಸ್ಪಾನ್ಸ್

ಶುಕ್ರವಾರ, 4 ಆಗಸ್ಟ್ 2023 (15:21 IST)
ಕಾಂಗ್ರೆಸ್ ನೀಡಿದ್ದ ಐದು ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಗೆ ಬಿಗ್ ರೆಸ್ಪಾನ್ಸ್ ಸಿಗ್ತಾಯಿದೆ. ಶಕ್ತಿ ಯೋಜನೆ ಪ್ರಾರಂಭವಾಗಿ ಸುಮಾರು ಎರಡು ತಿಂಗಳ ನಂತರ ಕೆಎಸ್ ಆರ್ ಟಿಸಿ ಮತ್ತು ಬಿಎಂಟಿಸಿ ಸೇರಿದಂತೆ ನಾಲ್ಕು ನಿಗಮಗಳಿಗೆ ಮೊದಲ ಕಂತಿನ ಹಣವಾಗಿ ಸರ್ಕಾರ ಬಿಡುಗಡೆ ಮಾಡಿದೆ.ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸುವ, ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಶಕ್ತಿ ಯೋಜನೆಗೆ ಜೂನ್ 11 ರಂದು ಚಾಲನೆ ನೀಡಲಾಗಿತ್ತು. ಮಹಿಳೆಯರ ಉಚಿತ ಪ್ರಯಾಣಕ್ಕಾಗಿ ಸರ್ಕಾರಿ ಬಸ್​​ಗಳಲ್ಲಿ ವಿತರಿಸಲಾಗಿರುವ ಟಿಕೆಟ್​​ನ ಒಟ್ಟು ಮೊತ್ತದ ಮೊದಲ ಕಂತನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಈವರೆಗೆ 4 ನಿಗಮಗಳಲ್ಲಿ 29.32 ಕೋಟಿ ಮಹಿಳೆಯರು ಪ್ರಯಾಣ ಮಾಡಿದ್ದಾರೆ.

ಯಾವ ನಿಗಮಕ್ಕೆ ಎಷ್ಟು ಹಣ ಅಂತ ನೋಡೋದಾದ್ರೆKSRTC - 47.15. ಕೋಟಿ
BMTC - 21.85. ಕೋಟಿ
NWRTC- 32.57. ಕೋಟಿ
KKRTC - 23.90. ಕೋಟಿ

ನಾಲ್ಕು ನಿಗಮಗಳಿಗೂ ಪ್ರತೇಕವಾಗಿ ಹಣ ಬಿಡುಗಡೆ ಮಾಡಲಾಗಿದೆ. ನಾಲ್ಕೂ ನಿಗಮಗಳು ಒಟ್ಟಾಗಿ ವಿತರಿಸಿರುವ ಶೂನ್ಯ ಟಿಕೆಟ್‌ ದರ 687 ಕೋಟಿ 49 ಲಕ್ಷದ 57 ಸಾವಿರದ 753 ರೂಪಾಯಿ ಆಗಿದ್ದು, ಈ ಮೊತ್ತದ ಒಂದು ಪಾಲನ್ನು ಅಥವಾ ಮೊದಲ ಕಂತನ್ನು ಸರ್ಕಾರ ಬಿಡುಗಡೆ ಮಾಡಿದೆ. 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ