ಸಮಸ್ಯೆ ಬಗೆಹರಿಯದಿದ್ದರೆ ಬಂದ್ ಮಾಡೋದಾಗಿ ಎಚ್ಚರಿಕೆ ನೀಡಿದಾಗ ಒಕ್ಕೂಟಗಳು

ಸೋಮವಾರ, 31 ಜುಲೈ 2023 (19:37 IST)
ಇಂದು ಖಾಸಗಿ ವಾಹನ ಚಾಲಕ ಮತ್ತು ಮಾಲಿಕರ ಜತೆ 2ನೇ ಬಾರಿಗೆ  ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಶಾಂತಿನಗರದ ಸಾರಿಗೆ ‌ಇಲಾಖೆ ಮುಖ್ಯ ಕಚೇರಿಯಲ್ಲಿ ಸಭೆ ನಡೆಸುತ್ತಿದ್ದಾರೆ.. ಆಟೋ, ಖಾಸಗಿ ಬಸ್, ಟ್ಯಾಕ್ಸಿ ಚಾಲಕರ ಜೊತೆ ಪ್ರತ್ಯೇಕ ಸಭೆ ನಡೆಸಿ ಸಮಸ್ಯಗಳನ್ನು ಕೆಳಿದ್ದಾರೆ. ಇನ್ನೂ ಸಭೆಬಳಿಕ ಮಾತನಾಡಿದ್ದ ಖಾಸಗಿ ಸಾರಿಗೆ ಒಕ್ಕೂಟದ ಅಧ್ಯಕ್ಷ  ನಟರಾಜ್ ನಮ್ಮ ಬೇಡಿಕೆಗಳನ್ನು ಸಚಿವರ ಮುಂದೆ ಇಟ್ಟಿದ್ದೆವೆ ಒಂದು ವೇಳೆ ನಮ್ಮ ಬೇಡಿಕೆಗಳನ್ನ ಆಗಸ್ಟ 10ರೊಳಗೆ ಇಡೆರಿಸದದಿದ್ದರೆ,ಬೆಂಗಳೂರು ಮಾತ್ರವಲ್ಲದೆ ರಾಜ್ಯದಾದ್ಯಂತ ಬಂದಮಾಡೊಕೆ ಒಕ್ಕೂಟದಿಂದ ತಿರ್ಮಾನ ಮಾದಲಾಗಿದೆ ಎಂದು ತೀಳಿಸಿದ್ದಾರೆ.

ಇನ್ನೂ ಸಬೆ ಬಳಿಕ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಒಕ್ಕೂಟಗಳು ವಿಮೆ ಮಾಡಿಸಬೇಕು, ಚಾಲಕರ ದಿನಾಚರಣೆ ಮಾಡ ಬೆಕು ಮತ್ತು ಕಾನೂನುಬಾಹಿರ ಆ್ಯಪ್‌ಗಳನ್ನು ಬ್ಯಾನ್ ಮಾಡುವಂತೆ ಮನವಿ ಮಾಡಿದ್ದು, ಏರ್ಪೋರ್ಟ್ ಬಳಿ ಇಂದಿರಾ ಕ್ಯಾಂಟೀನ್ ಓಪನ್ಗೆ ಬೇಡಿಕೆ ಇದೆ. ಜಾಗ ಕೊಟ್ಟರೆ ಕೂಡಲೇ ಇಂದಿರಾ ಕ್ಯಾಂಟೀನ್ ಓಪನ್ ಮಾಡುತ್ತೇವೆ. ಖಾಸಗಿ ಬಸ್ಗಳ ಚಾಲಕರು ಕೂಡ ಸಮಸ್ಯೆ ಹೇಳಿಕೊಂಡಿದ್ದಾರೆ. ವಾಹನಗಳ ಮೇಲೆ ಬ್ಲಾಕ್ ಲಿಸ್ಟ್ ತೆಗೆಯಲು ಅದಾಲತ್ ಮಾಡುತ್ತೇವೆ. ಇದೆಲ್ಲವು ಮುಖ್ಯ ಮಂತ್ರಿಗಳೊಟ್ಟಿಗೆ ಚರ್ಚೆ ನಡೆಸಿ ತಿಮಾನ ಕೈಗೊಳಲಾಗುವು ಎಂದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ತೀಳಿಸಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ