ಬಿಜೆಪಿಗೆ ಬಿಗ್ ಶಾಕ್ : ಉಪಚುನಾವಣೆಯಲ್ಲಿ ಬೆಂಬಲವಿಲ್ಲ ಎಂದ ಸುಮಲತಾ ಅಂಬರೀಶ್

ಶನಿವಾರ, 2 ನವೆಂಬರ್ 2019 (17:58 IST)
ರಾಜ್ಯದ ಉಪಚುನಾವಣೆಯಲ್ಲಿ ಯಾರಿಗೂ ನನ್ನ ಬೆಂಬಲ ಇಲ್ಲ. ಹೀಗಂತ ಹೇಳೋ ಮೂಲಕ ಸಂಸದೆ ಸುಮಲತಾ ಅಂಬರೀಶ್ ಬಿಜೆಪಿಗೆ ಬಿಗ್ ಶಾಕ್ ನೀಡಿದ್ದಾರೆ.

ಬೈ ಎಲೆಕ್ಷನ್ ನಲ್ಲಿ ಬೆಂಬಲ ನೀಡಿ ಅಂತ ಯಾರೂ ಕೇಳಿಲ್ಲ. ಇಲ್ಲಿವರೆಗೂ ಯಾರೊಬ್ಬರೂ ಬಂದು ಭೇಟಿ ಮಾಡಿಲ್ಲ ಎಂದಿದ್ದಾರೆ.
ಜನರೇ ನನಗೆ ಹೈಕಮಾಂಡ್. ನಾನೇ ಹೈಕಮಾಂಡ್. ಜನರೇ ಬಂದು ಹೇಳಿದಾಗ ಅವರ ಇಷ್ಟಾನಿಷ್ಟಾ ನೋಡಿ ಮುಂದುವರಿಯುತ್ತೇನೆ ಎಂದ್ರು.

ನಾನು ಪಕ್ಷೇತರ ಸಂಸದೆಯಾಗಿರೋ ಕಾರಣ ನನಗೆ ಬಲವಂತ ಯಾರೂ ಮಾಡೋಕೆ ಸಾಧ್ಯವಿಲ್ಲ. ನಾನೂ ತಟಸ್ಥವಾಗಿಯೂ ಇರಬಹುದು ಅಂತ ಸುಮಲತಾ ಅಂಬರೀಶ್ ಹೇಳಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ