ಅಧಿಕಾರಿಗಳ ವಶವಾದ ನಾಲ್ವರನ್ನು ಹಸ್ಮುಖಲಾಲ್ ದೀಕ್ಷಿತ್, ಮಹೇಶ್ ಭೋಮ್ಸರ್, ಸುರೇಶ್ ಸಹದೇವ್ ಖರೆ ಮತ್ತು ದೀಪಕ್ ಪಟೇಲ್ ಎಂದು ಗುರುತಿಸಲಾಗಿದೆ. ಸರಕು ಮತ್ತು ಸೇವಾ ತೆರಿಗೆ(GST) ದಾಖಲೆಗಳನ್ನು ಸಲ್ಲಿಸಲು ವಿಫಲರಾದ ಹಿನ್ನೆಲೆಯಲ್ಲಿ ವಿಚಾರಣೆಗಾಗಿ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಆರ್ ಪಿ ಸ್ಪಷ್ಟಪಡಿಸಿದೆ.ನಾಲ್ವರು ವ್ಯಕ್ತಿಗಳು ಮುಂಬೈಯಿಂದ ನಾಲ್ಕು ಬ್ಯಾಗ್ ಗಳ ಜೊತೆ ಬಂದಿದ್ದರು. ಒಂದೊಂದು ಬ್ಯಾಗ್ ನಲ್ಲಿ ಸುಮಾರು 8 ಕೆ.ಜಿಯಷ್ಟು ಬಂಗಾರ ತುಂಬಿದ್ದರು. ಭುವನೇಶ್ವರದಲ್ಲಿ ಚಿನ್ನದ ವ್ಯಾಪಾರಿಗಳಿಗೆ ಮಾರಾಟ ಮಾಡುವುದು ಅವರ ಪ್ಲ್ಯಾನ್ ಆಗಿತ್ತು. ಈ ವೇಳೆ ನಾಲ್ವರು ವ್ಯಕ್ತಿಗಳ ಮೇಲೆ ಅನುಮಾನ ಬಂದು ಪರಿಶೀಲನೆ ನಡೆಸಿದಾಗ ಚಿನ್ನ ಸಾಗಾಟ ಮಾಡುತ್ತಿರುವುದು ಬಯಲಾಗಿದೆ ಎಂದು ಭುವನೇಶ್ವರದ ಜಿಆರ್ ಪಿ ಇನ್ಸ್ ಪೆಕ್ಟರ್ ತಿಳಿಸಿದ್ದಾರೆ.ಈ ಆಭರಣಗಳಿಗೆ ಅವರು ತೆರಿಗೆ ಪಾವತಿಸುತ್ತಿರಲಿಲ್ಲ. ಹೀಗಾಗಿ ಈ ಚಿನ್ನವನ್ನು ಯಾರಿಗೆ ನೀಡುತ್ತಿದ್ದೇವೆ ಎಂಬುದನ್ನು ಸರಿಯಾಗಿ ಬಾಯಿಬಿಟ್ಟಿಲ್ಲ. ಒಟ್ಟಿನಲ್ಲಿ ಈ ಸಂಬಂಧ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಇತ್ತ 32 ಕೆ.ಜಿ ಚಿನ್ನವನ್ನು ಜಿಆರ್‍ಪಿ ಅಧಿಕಾರಿಗಳು ಕೈಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.