40% ಪರ್ಸೆಂಟ್ ಸರ್ಕಾರದ ವಿರುದ್ಧ ಗುತ್ತಿಗೆದಾರರು ಪ್ರತಿಭಟನೆ

ಬುಧವಾರ, 18 ಜನವರಿ 2023 (14:13 IST)
ಇಂದು ರಾಜ್ಯ ಗುತ್ತಿಗೆದಾರರ ಸಂಘದಿಂದ ಪ್ರತಿಭಟನೆಯನ್ನ ನಡೆಸಲಾಗಿದೆ.ಬೆಂಗಳೂರಿನ ಪ್ರೀಡಂ ಪಾರ್ಕ್ ನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಗುತ್ತಿಗೆದಾರರಿಂದ ಪ್ರತಿಭಟನೆ ನಡೆಯುತ್ತಿದೆ.ಪ್ರತಿಭಟನೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ಗುತ್ತಿಗೆದಾರರು ಭಾಗಿಯಾಗಿದ್ದು,
 
ರಾಜ್ಯ ಗುತ್ತಿಗೆದಾರರ ಸಂಘದ ಕೆಂಪಣ್ಣ ನೇತೃತ್ವದಲ್ಲಿ ಸಾಂಕೇತಿಕವಾಗಿ ಒಂದು ದಿನ ಕಾಮಗಾರಿ ಬಂದ್ ಮಾಡಿ ಪ್ರತಿಭಟನೆ ಮಾಡಲಾಗಿದ್ದು,ಸರ್ಕಾರದಿಂದ ಸುಮಾರು 20 ಸಾವಿರ ಕೋಟಿ ಬಿಲ್ ಬಾಕಿ ಹಿನ್ನೆಲೆ ಕಳೆದ ಬಾರಿ ಸರ್ಕಾರ ನೀಡಿದ್ದ ಭರವಸೆ ಇನ್ನೂ ಭರವಸೆಯಾಗಿ ಉಳಿದಿದೆ.ಬಿಲ್ ವಿಚಾರದಲ್ಲಿ ಕೊಟ್ಟ ಮಾತಿನಂತೆ ನಡೆಸಿಕೊಂಡಿಲ್ಲ.ಬಾಕಿ ಮೊತ್ತದಲ್ಲಿ ಒಂದು ರೂಪಾಯಿ ಕೂಡ ಪಾವತಿಯಾಗಿಲ್ಲ.ಭ್ರಷ್ಟಾಚಾರ ಆರೋಪ ಮಾಡಿದ ಅಧ್ಯಕ್ಷರನ್ನು ಜೈಲು ಪಾಲು ಮಾಡಿದ್ದ ಸರ್ಕಾರ.ಭ್ರಷ್ಟಾಚಾರ ಆರೋಪ ಮಾಡಿದ್ರೆ ಬಿಜೆಪಿಯವರು ಜೈಲಿಗೆ ಕಳಿಸ್ತಾರೆ.ನ್ಯಾಯ ಕೇಳಿದ್ರೆ ಬಿಲ್ ಪಾವತಿ ತಡ ಮಾಡ್ತಾರೆ.ಇಲ್ಲ ಸಲ್ಲದ ತಾಂತ್ರಿಕ ಕಾರಣಗಳನ್ನು ಹೇಳಿ ಪಾವತಿ ದಿನಾಂಕ ಮುಂದೂಡುತ್ತಲೇ ಇದ್ದಾರೆ.ಈ ಹಿನ್ನೆಲ್ ಸಿಡಿದೆದ್ದ ಗುತ್ತಿಗೆದಾರರ ಸಂಘ ಸರ್ಕಾರ ಕ್ಕೆ ಡೆಡ್ ಲೈನ್ ನೀಡಿದೆ.ಈ ತಿಂಗಳ ಅಂತ್ಯದೋಳಗೆ ಬಾಕಿ ಬಿಲ್ ಪಾವತಿ ಮಾಡಬೇಕು.ಇಲ್ಲವಾದ್ರೆ.. ರಾಜ್ಯದಲ್ಲಿ ನಡೆಯುತ್ತಿರೋ ಎಲ್ಲಾ ಕಾಮಗಾರಿಗಳನ್ನು ಬಂದ್ ಮಾಡ್ತೀವಿ.ಕೂಡಲೇ ಬಾಕಿ ಬಿಲ್ ಪಾವತಿ ಮಾಡಿ ಎಂದು ಆಗ್ರಹಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ