ಪರಿವರ್ತನಾ ಯಾತ್ರೆಗೆ ಕ್ಷಣಗಣನೆ: ಬಿಐಇಸಿ ಮೈದಾನದಲ್ಲಿ ಸಕಲ ಸಿದ್ಧತೆ

ಗುರುವಾರ, 2 ನವೆಂಬರ್ 2017 (11:09 IST)
ಬೆಂಗಳೂರು: ಬಿಜೆಪಿಯ ಮಹಾತ್ವಾಕಾಂಕ್ಷಿ ಪರಿವರ್ತನಾ ಯಾತ್ರೆ ಆರಂಭಕ್ಕೆ ನೆಲಮಂಗಲ ಮಾದವಾರ ಬಿಐಇಸಿ ಮೈದಾನದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

17 ಜಿಲ್ಲೆಗಳ 27 ಸಾವಿರ ಬೂತ್ ಗಳಿಂದ ಬೈಕ್ ಮೂಲಕ ಕಾರ್ಯಕರ್ತರು ಆಗಮಿಸಲಿದ್ದಾರೆ. 11.30ಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಆಗಮಿಸಲಿದ್ದು, ಮಾಜಿ ಡಿಸಿಎಂ ಆರ್. ಅಶೋಕ್ ಗೆ ಸಮಾವೇಶದ ಜವಾಬ್ದಾರಿ ವಹಿಸಲಾಗಿದೆ.

75 ದಿನ ನಡೆಯಲಿರುವ ರಥಯಾತ್ರೆ ವೇದಿಕೆ ಮೇಲೆ 90 ನಾಯಕರಿಗೆ ಅವಕಾಶ ಕಲ್ಪಿಸಲಾಗಿದ್ದು, ಮೊದಲ ಸಾಲಿನಲ್ಲಿ ಪ್ರಮುಖ 30 ನಾಯಕರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ. ಸುಮಾರು 30 ಸಾವಿರ ಕಾರ್ಯಕರ್ತರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ.

ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಕೇಂದ್ರ ವಲಯ ಐಜಿಪಿ ಅಮೃತ್ ಪಾಲ್ ನೇತೃತ್ವದಲ್ಲಿ ಭಾರೀ ಭದ್ರತೆ ಒದಗಿಸಿದೆ. 4 ಎಸ್ಪಿ, 4 ಎಎಸ್ಪಿ, 14 ಡಿವೈಎಸ್ಪಿ, 31 ಸಿಪಿಐ, 61 ಪಿಎಸ್ಐ, 135 ಎಎಸ್ಐ, 6 ಕೆಎಸ್ ಆರ್ ಪಿ, 8 ಡಿಎಆರ್ ತುಕಡಿ ನಿಯೋಜನೆ, ಮೈದಾನದಲ್ಲಿ 30ಕ್ಕೂ ಹೆಚ್ಚು ಸಿಸಿ ಕ್ಯಾಮರಗಳ ಅಳಡವಳಿಕೆ ಮಾಡಲಾಗಿದೆ. ಒಟ್ಟು 15 ಸಾವಿರಕ್ಕೂ ಹೆಚ್ಚು ಜನ ಪೊಲೀಸರ ನಿಯೋಜನೆ ಮಾಡಲಾಗಿದೆ.

ಕಾರ್ಯಕ್ರಮದಲ್ಲಿ ಲಕ್ಷಕ್ಕೂ ಹೆಚ್ಚು ಬೈಕ್ ಹಾಗೂ ನಾಲ್ಕು ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರು ಸೇರುವ ನಿರೀಕ್ಷೆಯಿದೆ.

ಇನ್ನು ನವ ಕರ್ನಾಟಕದ ನಿರ್ಮಾಣಕ್ಕಾಗಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ನೇತೃತ್ವದಲ್ಲಿ 224 ವಿಧಾನಸಭಾ ಕ್ಷೇತ್ರಗಳಲ್ಲಿ ಯಾತ್ರೆ ಸಂಚಾರ ಮಾಡಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ