ಒಂದು ಪೈಸೆ ಹಣ ಪಡೆದಿಲ್ಲ – ದೇವ್ರಾಣೆ ಎಂದ ಬಿಜೆಪಿ ಅಭ್ಯರ್ಥಿ

ಶುಕ್ರವಾರ, 22 ನವೆಂಬರ್ 2019 (19:22 IST)
ಹಣ ಪಡೆದಿರುವದನ್ನು ಸಾಬೀತು ಪಡಿಸಿದರೆ ರಾಜಕೀಯ ಬಿಟ್ಟು ಮನೆಯಲ್ಲಿ ಕೂಡುತ್ತೇನೆ. ಹೀಗಂತ ಮಾಜಿ ಶಾಸಕ, ಅನರ್ಹ ಶಾಸಕರೊಬ್ಬರು ಹೇಳಿದ್ದಾರೆ.

ಅಥಣಿಯಲ್ಲಿ ಅನರ್ಹ ಶಾಸಕ, ಕಾಗವಾಡ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ ಸ್ಪಷ್ಟನೆ ನೀಡಿದ್ದು, ಬಿಸಿನೆಸ್ ಆಗಲಿ, ರಾಜಕೀಯವಾಗಲಿ ನಾವು ರೈತರು, ಜನರಿಗಾಗಿಯೇ ಮಾಡೋದು. ಹೀಗಂತ ಹೇಳೋ ಮೂಲಕ ಕಾಗವಾಡ ಕಾಂಗ್ರೆಸ್ ಅಭ್ಯರ್ಥಿ ರಾಜು‌ ಕಾಗೆಗೆ ಶ್ರೀಮಂತ ಪಾಟೀಲ ಟಾಂಗ್ ನೀಡಿದ್ರು.

ರೈತರ ಸೇವೆಗಾಗಿ ಸಕ್ಕರೆ ಕಾರ್ಖಾನೆ ತೆರೆದಿದ್ದೇವೆ. ಜನರ ಸೇವೆಗಾಗಿ ರಾಜಕೀಯಕ್ಕೆ ಬಂದಿದ್ದೇವೆ. ಡಿಸಿಎಂ‌ ಲಕ್ಷ್ಮಣ ಸವದಿ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತೇವೆ ಅಂತ ಅಥಣಿಯಲ್ಲಿ ಕಾಗವಾಡ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ ಹೇಳಿಕೆ ನೀಡಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ