ವಿಧಾನಸಭೆ ವಿರೋಧಪಕ್ಷದ ನಾಯಕರಾಗಿ ಆಯ್ಕೆಯಾದ ಬಳಿಕ ಕಾಂಗ್ರೆಸ್ ಶಾಸಕರೊಂದಿಗೆ ಸಭೆ ನಡೆಸಿದ ಸಿದ್ದರಾಮಯ್ಯ ಶಾಸಕರೊಂದಿಗೆ ಮಾತನಾಡುವ ವೇಳೆ ಈ ಹೊಸ ಬಾಂಬ್ ಸಿಡಿಸಿದ್ದಾರೆ.
ಯಡಿಯೂರಪ್ಪನವರ ಸರ್ಕಾರ ಕಡೇ ಪಕ್ಷ ಒಂದು ವರ್ಷಗಳ ಕಾಲವಾದರೂ ಅಧಿಕಾರದಲ್ಲಿದ್ದರೆ ಸರ್ಕಾರದ ವೈಫಲ್ಯಗಳನ್ನು ಮುಂದಿಟ್ಟುಕೊಂಡು ಚುನಾವಣೆಗೆ ಹೋಗಬಹುದಿತ್ತು. ಆದರೆ ಈ ಸರ್ಕಾರ ಅಲ್ಲಿಯವರೆಗೂ ಮುಂದುವರೆಯುವುದು ಕಷ್ಟ ಈಗಿನಿಂದಲೇ ಚುನಾವಣೆಗೆ ಸಿದ್ಧತೆ ನಡೆಸಿ ಎಂದು ಸಿದ್ದರಾಮಯ್ಯ ಶಾಸಕರುಗಳಿಗೆ ಸಲಹೆ ನೀಡಿದ್ದಾರೆ.