ಡೆಲ್ಲಿಗೆ ಹೋಗಿ ಕೇಂದ್ರದ ಬಿಜೆಪಿ ವರಿಷ್ಠರ ಜೊತೆ ಹೆಚ್.ಡಿ ಕುಮಾರಸ್ವಾಮಿ ಅಧಿಕೃತವಾಗಿ ಮೈತ್ರಿ ಖಾತ್ರಿ ಮಾಡಿಕೊಂಡ ಬಳಿಕ, ೨೮ ಲೋಕಸಭಾ ಕ್ಷೇತ್ರಗಳಲ್ಲಿ ದಳಪತಿಗಳಿಗೆ ಸಿಗೋದು ಎಷ್ಟು ಎಂಬುದರ ಬಗ್ಗೆ ಹೆಚ್‌ಡಿಡಿ ಆಗಲಿ, ಇಲ್ಲ ಕುಮಾರಸ್ವಾಮಿ ಆಗಲೀ ಸ್ಪಷ್ಟವಾದ ಮಾಹಿತಿ ಕೊಟ್ಟಿಲ್ಲ. ಆ ಕಡೆ ಬಿಜೆಪಿಯ ಕಡೆಯಿಂದಲೂ ಜೆಡಿಎಸ್‌ಗೆ ಎಷ್ಟು ಕ್ಷೇತ್ರಗಳು ಸಿಗಲಿವೆ, ಅನ್ನೋದರ ಬಗ್ಗೆ ಸ್ಪಷ್ಟಿಕರಣ ಸಿಕ್ಕಿಲ್ಲ..
ಆದರೆ ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯಲ್ಲಿ ಯಾರಿಗೆ ಎಷ್ಟು ಕ್ಷೇತ್ರ ಎಂಬುದರ ಬಗ್ಗೆ ಚರ್ಚಿಸಲು ಜೆಡಿಎಸ್ ನಾಯಕ ಹೆಚ್.ಡಿ ಕುಮಾರಸ್ವಾಮಿಯವರು ನವಂಬರ್ ೩ರಂದು ಡೆಲ್ಲಿಗೆ ತೆರಳಲಿದ್ದಾರೆ. ಮೊದಲಿಗೆ ಮೈತ್ರಿಯ ಮುಂದಾಳತ್ವ ವಹಿಸಿದ್ದ ಗೋವಾ ಸಿಎಂ ಪ್ರಮೋದ್ ಸಾವಂತ್‌ರನ್ನು ಹೆಚ್‌ಡಿಕೆ ಭೇಟಿ ಮಾಡಲಿದ್ದಾರೆ. ಆ ಬಳಿಕ ಕೆಲವೇ ದಿನಗಳ ಬಳಿಕ ಬಿಜೆಪಿಯ ವರಿಷ್ಠರ ಜೊತೆ ಜೆಡಿಎಸ್ ನಾಯಕರು ಸಭೆ ನಡೆಸಲಿದ್ದಾರೆ ಅನ್ನುವ ಮಾಹಿತಿ ಕೇಳಿ ಬರ್ತಾ ಇದೆ.
ದಳಪತಿಗಳ ಹೀಗೊಂದು ಬೇಡಿಕೆ ಇಡಬಹುದು ಅನ್ನುವ ಲೆಕ್ಕಾಚಾರ ಮುನ್ನಲೆಗೆ ಬಂದಿದೆ. ೨೮ ರಾಜ್ಯದ ಲೋಕಸಭಾ ಕ್ಷೇತ್ರಗಳ ಪೈಕಿ, ಜೆಡಿಎಸ್ ಪ್ರಮುಖವಾದ ಆರು ಕ್ಷೇತ್ರಗಳನ್ನು ಬಿಟ್ಟು ಕೊಡುವಂತೆ, ಮೋದಿ ಮತ್ತು ಅಮಿತ್‌ಶಾ ಜೊತೆಗೆ ಹೆಚ್.ಡಿ ಕುಮಾರಸ್ವಾಮಿ ಬೇಡಿಕೆ ಇಟ್ಟು ಬರಬಹುದು ಎನ್ನಲಾಗ್ತಿದೆ.