ಕೃತಕ ವಿದ್ಯುತ್‌ ಅಭಾವ ಸೃಷ್ಟಿಸುವ ಪ್ರಯತ್ನ: ಪ್ರಹ್ಲಾದ್‌ ಜೋಶಿ ಕಿಡಿ

ಸೋಮವಾರ, 30 ಅಕ್ಟೋಬರ್ 2023 (11:28 IST)
ಕರ್ನಾಟಕವನ್ನು ವಿದ್ಯುತ್‌ ಮುಕ್ತ ರಾಜ್ಯವನ್ನಾಗಿ ಮಾಡಲು ಹೊರಟಿರಬಹುದು. ಲೋಡ್‌ ಶೆಡ್ಡಿಂಗ್‌ ಜಾರಿಗೊಳಿಸುವ ಮೂಲಕ  ಡಿ.ಕೆ.ಶಿವಕುಮಾರ್‌ ಅವರು ರಾಜ್ಯದಲ್ಲಿ ಕೃತಕ ವಿದ್ಯುತ್‌ ಅಭಾವ ಸೃಷ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಪ್ರಹ್ಲಾದ್‌ ಜೋಶಿ ಕಿಡಿಕಾರಿದ್ದಾರೆ. 
 
ವಿದ್ಯುತ್‌ ಅಭಾವ ಸೃಷ್ಟಿಸುವ ಮೂಲಕ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಪದಚ್ಯುತಗೊಳಿಸಿ ತಾವೇ ಮುಂದಿನ ಮುಖ್ಯಮಂತ್ರಿಯಾಗಬೇಕು ಎಂಬ ಉದ್ದೇಶ ಶಿವಕುಮಾರ್‌ ಅವರಿಗೆ ಇರುವಂತಿದೆ ಎಂದು  ಆಪಾದಿಸಿದ್ದಾರೆ.  
 
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಈ ಬಾರಿ ಅತ್ಯುತ್ತಮವಾಗಿ ಮಳೆ ಆಗಿದೆ. ಹಲವೆಡೆ ಅತಿವಷ್ಟಿಯಾಗಿದೆ. ಎಲ್ಲ ಜಲಾಶಯಗಳು ಭರ್ತಿಯಾಗಿವೆ. ಮಳೆ ಚೆನ್ನಾಗಿ ಆಗುತ್ತಿರುವುದರಿಂದ ಸಹಜವಾಗಿಯೇ ವಿದ್ಯುತ್‌ ಬೇಡಿಕೆಯೂ ಕಡಮೆಯಾಗಿದೆ. ಆದರೆ, ಏಕಾಏಕಿ ಶಿವಕುಮಾರ್‌ ಅವರು ಲೋಡ್‌ ಶೆಡ್ಡಿಂಗ್‌ಗೆ ಮುಂದಾಗಿರುವುದು ವಿಚಿತ್ರವಾಗಿದೆ ಎಂದು ಜೋಷಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ