ಆರ್‌ಎಸ್ಎಸ್ ಸಿದ್ಧಾಂತವನ್ನು ಪ್ರಸಾರ ಮಾಡಲು ದೂರದರ್ಶನವನ್ನು ಬಳಸಿಕೊಂಡಿದ್ದಕ್ಕೆ ಕೇಂದ್ರ ಸರಕಾರದ ಮೇಲೆ ಕಟು ವಾಗ್ದಾಳಿ ನಡೆಸಿದ ಪವಾರ್, ಒಬ್ಬರ ಸಿದ್ಧಾಂತವನ್ನು ಜನರ ಮೇಲೆ ಬಲವಂತವಾಗಿ ಹೇರುವುದು ಆತಂಕವನ್ನು ಉಂಟು ಮಾಡುವಂತಹ ವಿಚಾರ. ಪ್ರಧಾನಿ ಪದವಿಯ ಪ್ರತಿಷ್ಠೆಯನ್ನು ತಗ್ಗಿಸುತ್ತಿದ್ದಾರೆ ಎಂದು ಶರದ್ ಪವಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಮ್ಮ ಪ್ರಾಬಲ್ಯವಿರುವ ಬಾರಾಮತಿ ಕ್ಷೇತ್ರದಲ್ಲಿನ ಜನರನ್ನು ಶರದ್ ಪವಾರ್ "ಗುಲಾಮ" ರಂತೆ ನಡೆಸಿಕೊಳ್ಳುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪ ಮಾಡಿದ್ದಕ್ಕೆ ಪ್ರತಿ ದಾಳಿ ನಡೆಸಿರುವ ಎನ್‌ಸಿಪಿ ಮುಖ್ಯಸ್ಥ ಮೋದಿ ವೈಯಕ್ತಿಕ ದಾಳಿ ನಡೆಸುವುದರ ಚರ್ಚೆಯ ಮೌಲ್ಯವನ್ನು ಕಡಿಮೆ ಮಾಡುತ್ತಿದ್ದಾರೆ ಅಲ್ಲದೇ ಪ್ರಧಾನಿ ಪದವಿಯ ಪ್ರತಿಷ್ಠೆಯನ್ನು ತಗ್ಗಿಸುತ್ತಿದ್ದಾರೆ ಎಂದು ಕಿಚಾಯಿಸಿದ್ದಾರೆ.