ಈ ನಡುವೆ ನಿನ್ನೆ ಮಾಧ್ಯಮಗಳ ಮುಂದೆ ವಿಜಯೇಂದ್ರ ಬಣದ ವಿರುದ್ಧ ವಾಗ್ದಾಳಿ ನಡೆಸಿದ್ದ ಯತ್ನಾಳ್, ಅವರು ರಾತ್ರೋ ರಾತ್ರಿ ಡಿಕೆ ಶಿವಕುಮಾರ್ ಮನೆಗೆ ಹೋಗಿ ಯಾವೆಲ್ಲಾ ಪತ್ರಕ್ಕೆ ಸಹಿ ಹಾಕಿಸಿಕೊಂಡು ಬಂದಿದ್ದಾರೆ, ಎಷ್ಟು ಭ್ರಷ್ಟಾಚಾರ ನಡೆಸಿದ್ದಾರೆ ಎಂಬುದಕ್ಕೆ ನನ್ನ ಬಳಿ ವಿಡಿಯೋ ದಾಖಲೆಯೇ ಇದೆ. ನನ್ನ ವಿರುದ್ಧ ಹೈಕಮಾಂಡ್ ಗೆ ದೂರು ಕೊಟ್ಟರೆ ಕೊಡಲಿ. ದೆಹಲಿಗೆ ಬರುವಂತೆ ನನಗೆ ಕರೆ ಬಂದಿದೆ. ಆದರೆ ನಾನು ಬರಲ್ಲ ಎಂದಿದ್ದೇನೆ. ಮೊದಲು ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಬದಲಾವಣೆಯಾಗಬೇಕು ಎಂದಿದ್ದರು.